ಸರಸ್ವತಿಪುರಂನ ಬದುಕು ಮಹಿಳಾ ಪಿಜಿ ಆವರಣದಲ್ಲಿ ಉಚಿತವಾಗಿ ಹೇರ್ ಕಲರಿಂಗ್ ಅಭಿಯಾನಕ್ಕೆ ಉತ್ತಮ ಸ್ಪಂದನೆ

1
ಸರಸ್ವತಿಪುರಂನ ಬದುಕು ಮಹಿಳಾ ಪಿಜಿ ಆವರಣದಲ್ಲಿ ಗುರುವಾರ ಗಾರ್ನಿಯರ್ ಕಂಪನಿ, ವಿಜಯವಾಣಿ ದಿನಪತ್ರಿಕೆ ಸಹಯೋಗದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಹೇರ್ ಕಲರಿಂಗ್ ಅಭಿಯಾನ ನೆರವೇರಿತು. ಎಚ್.ಎಸ್.ಮಹೇಶ್ವರಿ ರಾಜು, ಬಿ.ಪಿ.ರಾಣಿ ಲಕ್ಷ್ಮಣ್, ಕೆ.ಎಸ್.ದಿವ್ಯಾ ಜಗದೀಶ್, ಎಚ್.ಎಸ್.ರಾಜು, ಚಂದ್ರು ಇದ್ದರು.
Published on

ಮೈಸೂರು: ಗಾರ್ನಿಯರ್ ಕಂಪನಿ, ವಿಜಯವಾಣಿ ದಿನಪತ್ರಿಕೆ ಸಹಯೋಗದಲ್ಲಿ ಆಯೋಜಿಸಿರುವ ಸಾರ್ವಜನಿಕರಿಗೆ ಉಚಿತವಾಗಿ ಹೇರ್ ಕಲರಿಂಗ್ ಅಭಿಯಾನ ಮುಂದುವರಿದಿದ್ದು, ಗುರುವಾರ ಸರಸ್ವತಿಪುರಂನ ಬದುಕು ಮಹಿಳಾ ಪಿಜಿ ಆವರಣದಲ್ಲಿ ನೆರವೇರಿತು.

ಲಯನ್ಸ್ ಕ್ಲಬ್ ಆಫ್ ಮೈಸೂರು ಪ್ಯಾಲೇಸ್ ಸಿಟಿ ಕ್ವೀನ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ಹೇರ್ ಕಲರಿಂಗ್ ಅಭಿಯಾನಕ್ಕೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಲಯನ್ಸ್ ಕ್ಲಬ್ ಆಫ್ ಮೈಸೂರು ಪ್ಯಾಲೇಸ್ ಸಿಟಿ ಕ್ವೀನ್ಸ್‌ನ ಅಧ್ಯಕ್ಷೆ ಎಚ್.ಎಸ್.ಮಹೇಶ್ವರಿ ರಾಜು ಹಾಗೂ ಕಮಿಟಿ ಛೇರ್ಮನ್ ಬಿ.ಪಿ.ರಾಣಿ ಲಕ್ಷ್ಮಣ್ ಚಾಲನೆ ನೀಡಿದರು. ಕಾರ್ಯದರ್ಶಿ ಆಶಾ ದರ್ಶನ್, ಮಾರ್ಗದರ್ಶಕ ಎಚ್.ಎಸ್.ರಾಜು, ಉದ್ಯಮಿ ಲಕ್ಷ್ಮಣ್, ಕೆ.ಎಸ್.ದಿವ್ಯಾ ಜಗದೀಶ್, ರಜಿನಿ ಶಿವಕುಮಾರ್, ಚಂದ್ರು, ಐಶ್ವರ್ಯ ಸೇರಿದಂತೆ ಇತರರಿದ್ದರು.

ಬೆಳಗ್ಗೆಯಿಂದ ಸಂಜೆವರೆವಿಗೂ ನಡೆದ ಅಭಿಯಾನದಲ್ಲಿ ನೂರಾರು ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಪುರುಷರು ಉತ್ಸಾಹದಿಂದ ಭಾಗವಹಿಸಿದ್ದರು. ಹನ್ನೊಂದು ಬಗೆಯ ಕಲರ್ ಇದ್ದು, ಆಸಕ್ತರು ತಮಗೆ ಇಷ್ಟವಾದ ಬಣ್ಣವನ್ನು ಆಯ್ಕೆ ಮಾಡಿಕೊಂಡರು. ದೇಶದ ಹೆಸರಾಂತ ಹೇರ್ ಕಲರಿಂಗ್ ಕಂಪನಿಯಾದ ಗಾರ್ನಿಯರ್ ಈ ಅಭಿಯಾನಕ್ಕಾಗಿ ವಿಶೇಷ ಮಾದರಿಯ ಸಲೂನ್ ವ್ಯವಸ್ಥೆಗೊಳಿಸಿದ್ದು, ಪುರುಷ, ಮಹಿಳೆಯರಿಗಾಗಿ ಪ್ರತ್ಯೇಕ ಪರಿಣಿತರು ವಿವಿಧ ವಿನ್ಯಾಸದ ಹೇರ್ ಕಲರಿಂಗ್ ಮಾಡಿದರು. ಹೇರ್ ಕಲರಿಂಗ್ ಮಾಡಿದ ಬಳಿಕ ಸ್ಥಳದಲ್ಲಿಯೇ ಹೇರ್ ಕ್ಲೀನಿಂಗ್ ವ್ಯವಸ್ಥೆ ಕೂಡ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net