ಕಲಘಟಗಿ ಬಂದ್​ಗೆ ಉತ್ತಮ ಸ್ಪಂದನೆ ಬರಪೀಡಿತ ಪಟ್ಟಿಗೆ ಸೇರಿಸಲು ಒತ್ತಾಯ

20-klg1b- protest
Published on

ಕಲಘಟಗಿ: ಬರಪೀಡಿತ ಪಟ್ಟಿಯಲ್ಲಿ ಕಲಘಟಗಿ ಹಾಗೂ ಅಳ್ನಾವರ ತಾಲೂಕುಗಳನ್ನು ಸೇರಿಸಬೇಕೆಂದು ಒತ್ತಾಯಿಸಿ ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಅವರ ನೇತೃತ್ವದಲ್ಲಿ ಬಿಜೆಪಿ ಕರೆ ನೀಡಿದ್ದ ಕಲಘಟಗಿ ಬಂದ್​ಗೆ ಬುಧವಾರ ಉತ್ತಮ ಸ್ಪಂದನೆ ದೊರಕಿತು.


ತಾಲೂಕಿನ ವಿವಿಧ ಹಳ್ಳಿಗಳಿಂದ ರೈತರು ಟ್ರ್ಯಾಕ್ಟರ್, ಚಕ್ಕಡಿಗಳ ಮೇಲೆ ಬಂದು ಪಟ್ಟಣದ ಎಪಿಎಂಸಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ರಾಷ್ಟ್ರೀಯ ಹೆದ್ದಾರಿ, ಬಮ್ಮಿಗಟ್ಟಿ ಕ್ರಾಸ್, ಬಸ್ ನಿಲ್ದಾಣ ಮಾರ್ಗವಾಗಿ ಅಳ್ನಾವರ ವೃತ್ತದಲ್ಲಿ ಸಂಚಾರ ಬಂದ್ ಮಾಡಿ ರಸ್ತೆ ನಡುವೆ ಕುಳಿತು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು.


ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಮಾತನಾಡಿ, ತಾಲೂಕಿನ ಕೃಷಿಕರ ಬದುಕು ತೀರಾ ಹದಗೆಟ್ಟಿದೆ. ರೈತರು ಸಾಲ ಮಾಡಿ ಬೀಜ ಬಿತ್ತಿ ತಲೆ ಮೇಲೆ ಕೈ ಇಟ್ಟುಕೊಂಡು ಸಂಕಷ್ಟ ಎದುರಿಸುತ್ತಿದ್ದಾರೆ. ಆದರೂ ಸ್ಥಳೀಯ ಶಾಸಕರಿಗೆ ತಮ್ಮದೇ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ತಾಲೂಕಿನಲ್ಲಿ ಬರಗಾಲ ಆವರಿಸಿದ್ದರೂ ಸರ್ಕಾರದ ಮಟ್ಟದಲ್ಲಿ ಕಲಘಟಗಿ ಕ್ಷೇತ್ರವನ್ನು ಬರಗಾಲ ಪೀಡಿತ ಎಂದು ಘೊಷಿಸುವಲ್ಲಿ ವಿಫಲರಾಗಿದ್ದಾರೆ. ಇದನ್ನರಿತ ಸಚಿವ ಸಂತೋಷ ಲಾಡ್ ಅವರು ಕ್ಷೇತ್ರಕ್ಕೆ ಬರೋದನ್ನ ಬಿಟ್ಟಿದ್ದಾರೆ. ಹುಬ್ಬಳ್ಳಿ- ಧಾರವಾಡಕ್ಕೆ ಭೇಟಿ ನೀಡಿ ಮೋಜು ನೋಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆ ನಂತರ ತಾಲೂಕು ಬಿಜೆಪಿ ಕಾರ್ಯಕರ್ತರು, ರೈತರು, ಸಾರ್ವಜನಿಕರು ಒಕ್ಕೂರಿಲಿನಿಂದ ಕೈ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಅವರಿಗೆ ಮನವಿ ಸಲ್ಲಿಸಿದರು.


ಸಿ.ಎಫ್. ಪಾಟೀಲ, ನಿಂಗಪ್ಪ ಸುತಗಟ್ಟಿ, ಬಸವರಾಜ ಶೆರೆವಾಡ, ಸದಾನಂದ ಚಿಂತಾಮಣಿ, ಐ.ಸಿ. ಗೋಕುಲ, ಮದನ ಕುಲಕರ್ಣಿ, ಕಲ್ಲಪ್ಪ ಪುಟ್ಟಪ್ಪನವರ, ಗೀತಾ ಮರಲಿಂಗಣ್ಣವರ, ಶಶಿಧರ ಹುಲಿಕಟ್ಟಿ, ಅಣ್ಣಪ್ಪ ಓಲೇಕಾರ, ಗುರುನಾಥ ದಾನೇನವರ, ಅರ್ಜುನ ಲಮಾಣಿ, ಮಂಗಲಪ್ಪ ಲಮಾಣಿ, ಮಹೇಶ ತಿಪ್ಪಣ್ಣವರ, ಗಂಗಾಧರ ಗೌಳಿ, ನಿಂಗಪ್ಪ ಗೌಳಿ, ವಜ್ರಕುಮಾರ ಮಾದನಬಾವಿ, ವೀರಭದ್ರ ಮನಗುಂಡಿ, ಪರಶುರಾಮ ಹುಲಿಹೊಂಡ, ಶ್ರೀಧರ ದ್ಯಾವಪ್ಪನವರ, ಸುನೀಲ ಕಮ್ಮಾರ, ಸಹದೇವ ಹರಮಣ್ಣವರ, ಬಸವರಾಜ ಮಾದರ, ಪುಂಡಲೀಕ ಜಾಧವ, ಆನಂದ ಕಡ್ಲಾಸ್ಕರ ಇತರರಿದ್ದರು.

ಕ್ಷೇತ್ರದ ರೈತರಿಗೆ ನ್ಯಾಯ ಕೊಡಿಸಲಾಗದ ಸಚಿವರಿಗೆ ಅಧಿಕಾರ ಏಕೆ ಬೇಕು. ಗೆದ್ದು ಬಿಗೋದು ದೊಡ್ಡ ವಿಷಯವಲ್ಲ. ಮತ ಹಾಕಿ ಗೆಲ್ಲಿಸಿದ ಜನರ ಕಷ್ಟಗಳನ್ನು ಆಲಿಸುವವರು ನಿಜವಾದ ನಾಯಕ.| ನಾಗರಾಜ ಛಬ್ಬಿ, ವಿ.ಪ ಮಾಜಿ ಸದಸ್ಯ ಕಲಘಟಗಿಯನ್ನು ಬರಪೀಡಿತ ತಾಲೂಕು ಎಂದು ಘೊಷಣೆ ಮಾಡುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ನಮಗೆ ನ್ಯಾಯ ಸಿಗದಿದ್ದರೆ ಸಚಿವರ ನಿವಾಸದ ಎದುರು ಧರಣಿ ಕುಳಿತುಕೊಳ್ಳುತ್ತೇವೆ. ಅದಕ್ಕೂ ಸ್ಪಂದನೆ ಸಿಗದಿದ್ದರೆ ಬೆಂಗಳೂರು ವಿಧಾನ ಸಭೆಯವರೆಗೆ ಪಾದಯಾತ್ರೆ ನಡೆಸಲು ತಯಾರಿದ್ದೇವೆ.| ಶಶಿಧರ ನಿಂಬಣ್ಣವರ, ಬಿಜೆಪಿ ಮುಖಂಡ ಸಾಲುಗಟ್ಟಿ ನಿಂತ ವಾಹನಗಳುಕಾರವಾರ- ಹುಬ್ಬಳ್ಳಿ ರಸ್ತೆ ಬಂದ್ ಮಾಡಿದ್ದರಿಂದ ಸುಮಾರು 2 ಗಂಟೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಪಟ್ಟಣದ ಹೊರವಲಯದಲ್ಲೇ ವಾಹನಗಳಿಗೆ ತಡೆ ನೀಡಲಾಗಿತ್ತು. 3 ಕಿ.ಮೀ.ವರೆಗೂ ಎರಡು ದಿಕ್ಕಿನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ದೂರದೂರಿಗೆ ಹೋಗುವ ಪ್ರಯಾಣಿಕರು ಪರದಾಡುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net