ಆರೋಗ್ಯ ತಪಾಸಣೆಗೆ ಉತ್ತಮ ಸ್ಪಂದನೆ

IMG-20240922-WA0323 (1)
Published on


ಅರಸೀಕೆರೆ ಗ್ರಾಮಾಂತರ : ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 32 ನೇ ಶ್ರದ್ಧಾಂಜಲಿ ಅಂಗವಾಗಿ ತರಳಬಾಳು ಯುವ ವೇದಿಕೆ ವತಿಯಿಂದ ತಾಲೂಕಿನ ಬಾಣಾವರ ಹೋಬಳಿ ಬೆಂಡೆಕೆರೆ ಗ್ರಾಮದಲ್ಲಿ ಭಾನುವಾರ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಲಾಗಿತ್ತು.
ಮಹಾಲಕ್ಷ್ಮೀ ಮಂಜಪ್ಪ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆ ಮತ್ತು ಕೀಲು ಮತ್ತು ಮೂಳೆ ತಜ್ಞರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 200ಕ್ಕೂ ಹೆಚ್ಚು ಜನರು ಪರೀಕ್ಷೆಗೆ ಒಳಪಟ್ಟರು. ತರಳಬಾಳು ಯುವ ವೇದಿಕೆ ಗೌರವ ಅಧ್ಯಕ್ಷ ಜಿ.ಎನ್.ಮಧು, ವೈದ್ಯ ಡಾ. ಉಮೇಶ್, ಮುಖಂಡರಾದ ಲಿಂಗರಾಜು, ಮಲ್ಲಪ್ಪ, ಪ್ರವೀಣ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net