

ಬೆಂಗಳೂರು: ಕನ್ನಡದ ನಂ.01 ದಿನಪತ್ರಿಕ ವಿಜಯವಾಣಿ ಸಹಯೋಗದಲ್ಲಿ ನಡೆದ ಬೆಂಗಳೂರಿನ ಸಿಟಿ ಸೆಂಟರ್, ಮಾಧವನ್ ಪಾರ್ಕ್, ಜಯನಗರದಲ್ಲಿ ಆಯೋಜಿಸಿದ್ದ ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಜುಲೈ 31ರವರೆಗೆ ಅಭಿಯಾನ ನಡೆಯಲಿದ್ದು, ರಾಜ್ಯಾದ್ಯಂತ ಅಭೂತಪೂರ್ವ ಸ್ಪಂದನೆ ದೊರೆಯುತ್ತಿದೆ. ನಗರದ ವಿವಿಧೆಡೆಯಿಂದ ಯುವಕ, ಯುವತಿಯರು ಸೇರಿದಂತೆ 100ಕ್ಕೂ ಹೆಚ್ಚು ಜನರು ಹೇರ್ ಕಲರಿಂಗ್ ಮಾಡಿಸಿಕೊಂಡರು.
ಹೇರ್ ಕಲರ್ ಮಾಡಿಸಿಕೊಂಡು ಮಾತನಾಡಿದ ರಾಜಾಜಿನಗರದ ನಿವಾಸಿ ಅಮರೇಶ್, ಹೇರ್ ಕಲರಿಂಗ್ ಕಂಪನಿ ಗಾರ್ನಿಯರ್, ವಿಜಯವಾಣಿ ಸಹಯೋಗದೊಂದಿಗೆ ಗಾರ್ನಿಯರ್ ಅಭಿಯಾನ ಪ್ರಾರಂಭಿಸಿ ಉಚಿತವಾಗಿ ಹೇರ್ ಕಲರಿಂಗ್ ಮಾಡಿಕೊಡುತ್ತಿದೆ. ಪತ್ರಿಕೆ ಓದುಗರಿಗೆ ಸುದ್ದಿಗಳನ್ನು ಕಟ್ಟಿಕೊಡುವುರ ಜತೆಗೆ ಇಂತಹ ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಇಂತಹ ಸೇವಾ ಕಾರ್ಯವನ್ನು ವಿಜಯವಾಣಿ ಪತ್ರಿಕೆ ಮುಂದುವರಿಸಲಿ ಎಂದು ಆಶಿಸಿದ್ಧಾರೆ.