ಸಾರ್ವಜನಿಕರಿಗೆ ಉಚಿತವಾಗಿ ಹೇರ್ ಕಲರಿಂಗ್ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ

6
Published on

ಮೈಸೂರು: ಗಾರ್ನಿಯರ್ ಕಂಪನಿ, ವಿಜಯವಾಣಿ ದಿನಪತ್ರಿಕೆ ಸಹಯೋಗದಲ್ಲಿ ಆಯೋಜಿಸಿರುವ ಸಾರ್ವಜನಿಕರಿಗೆ ಉಚಿತವಾಗಿ ಹೇರ್ ಕಲರಿಂಗ್ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಎರಡನೇ ದಿನವಾದ ಭಾನುವಾರ ಗೋಕುಲಂ 3ನೇ ಹಂತದ ಸಮೃದ್ಧಿ ಟ್ರಸ್ಟ್ ಆವರಣದಲ್ಲಿ ಆಯೋಜಿಸಿದ್ದ ಹೇರ್ ಕಲರಿಂಗ್ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಬೆಳಗ್ಗೆಯಿಂದ ಸಂಜೆವರೆವಿಗೂ ನಡೆದ ಅಭಿಯಾನದಲ್ಲಿ ಸಮೃದ್ಧಿ ಟ್ರಸ್ಟ್ ಹಾಗೂ ರಾಮಕೃಷ್ಣ ಪರಮಹಂಸ ಯೋಗ ಟ್ರಸ್ಟ್ ಸೇರಿದಂತೆ ಇತರೆ ಮಹಿಳಾ ಸಂಘಟನೆಗಳ ನೂರಾರು ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದರು.

ಹನ್ನೊಂದು ಬಗೆಯ ಕಲರ್ ಇದ್ದು, ಆಸಕ್ತರು ತಮಗೆ ಇಷ್ಟವಾದ ಬಣ್ಣವನ್ನು ಆಯ್ಕೆ ಮಾಡಿಕೊಂಡರು. ದೇಶದ ಹೆಸರಾಂತ ಹೇರ್ ಕಲರಿಂಗ್ ಕಂಪನಿಯಾದ ಗಾರ್ನಿಯರ್ ಈ ಅಭಿಯಾನಕ್ಕಾಗಿ ವಿಶೇಷ ಮಾದರಿಯ ಸಲೂನ್ ವ್ಯವಸ್ಥೆಗೊಳಿಸಿದ್ದು, ಪುರುಷ, ಮಹಿಳೆಯರಿಗಾಗಿ ಪ್ರತ್ಯೇಕ ಪರಿಣಿತರು ವಿವಿಧ ವಿನ್ಯಾಸದ ಹೇರ್ ಕಲರಿಂಗ್ ಮಾಡಿದರು. ಹೇರ್ ಕಲರಿಂಗ್ ಮಾಡಿದ ಬಳಿಕ ಸ್ಥಳದಲ್ಲಿಯೇ ಹೇರ್ ಕ್ಲೀನಿಂಗ್ ವ್ಯವಸ್ಥೆ ಕೂಡ ಮಾಡಲಾಗಿತ್ತು.

ನಗರದ ವಿವಿಧೆಡೆ ಹಲವು ದಿನಗಳ ಕಾಲ ನಡೆಯುವ ಈ ಉಚಿತ ಅಭಿಯಾನದಲ್ಲಿ ಆಸಕ್ತ ಸಂಘ, ಸಂಸ್ಥೆಗಳು, ಮಹಿಳಾ ಸಂಘಟನೆಗಳು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net