ರಾಷ್ಟ್ರಧ್ವಜ ವಿತರಣೆಗೆ ಉತ್ತಮ ಸ್ಪಂದನೆ

CLK NATIONAL FLAG 13
Published on

ಚಳ್ಳಕೆರೆ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಾರ್ವಜನಿಕವಾಗಿ ಅಂಚೆ ಇಲಾಖೆ ವಿತರಿಸುತ್ತಿರುವ ರಾಷ್ಟ್ರಧ್ವಜದ ಕುರಿತು ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ನಗರದ ಪ್ರಧಾನ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಎಸ್.ಟಿ.ಗೀತಾ ಹೇಳಿದರು.

ನಗರದ ನೆಹರು ವೃತ್ತದ ಬಳಿ ಭಾನುವಾರ ಸಾರ್ವಜನಿಕವಾಗಿ ರಾಷ್ಟ್ರಧ್ವಜಗಳನ್ನು ವಿತರಿಸಿ ಮಾತನಾಡಿದರು.

ಸ್ವಾತಂತ್ರ್ಯ ದಿನಾಚರಣೆ ಮತ್ತು ದೇಶಾಭಿಮಾನದ ಜಾಗೃತಿಗಾಗಿ ಕೇಂದ್ರ ಸರ್ಕಾರದಿಂದ ರಾಷ್ಟ್ರಧ್ವಜ ವಿತರಣೆ ಮಾಡಲಾಗುತ್ತಿದೆ. ನಗರದ ಅಂಚೆ ಕಚೇರಿಗೆ ಬಂದಿರುವ 950 ರಾಷ್ಟ್ರಧ್ವಜಗಳನ್ನು ಒಂದಕ್ಕೆ 25 ರೂಪಾಯಿಯಂತೆ ಸಾರ್ವಜನಿಕವಾಗಿ ನೀಡಲಾಗುತ್ತಿದೆ ಎಂದರು.

ಧ್ವಜ ಪಡೆಯುವ ಸಾರ್ವಜನಿಕರು ಸರ್ಕಾರಿ ಇಲಾಖೆಗಳಿಂದ ಧ್ವಜ ವಿತರಣೆ ಕಾರ್ಯ ಜಾಗೃತಿ ಮತ್ತು ದೇಶದ ಮೌಲ್ಯತೆ ಸಾರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಟೌನ್ ಬಳಕೆದಾರರ ಸಹಕಾರ ಸಂಘದ ನಿರ್ದೇಶಕ ಸಂಜೀವಶೆಟ್ಟಿ, ಕೆ.ಕಿಶೋರ್ ಕುಮಾರ್ ಶೆಟ್ಟಿ, ಡಾ.ತಿಪ್ಪೇಸ್ವಾಮಿ, ದಿನೇಶ್ ಶೆಟ್ಟಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net