ಕೆನರಾ ಬ್ಯಾಂಕ್ ಲೋನ್ ಮೇಳಕ್ಕೆ ಉತ್ತಮ ಸ್ಪಂಧನೆ

New Canara Bank New
Published on

ಹುಬ್ಬಳ್ಳಿ : ಇಲ್ಲಿನ ಕೆನರಾ ಬ್ಯಾಂಕ್ ವೃತ್ತ ಕಚೇರಿಯಿಂದ ‘ಕೆನರಾ ಮೆಗಾ ರಿಟೈಲ್ ಎಕ್ಸ್​ಪೋ’ ಲೋನ್ ಮೇಳವನ್ನು ಗೋಕುಲ ರಸ್ತೆಯ ಅರ್ಬನ್ ಓಯಾಸಿಸ್ ಮಾಲ್​ನಲ್ಲಿ ಸೋಮವಾರ ಆಯೋಜಿಸಲಾಗಿತ್ತು.

ಮೈಕ್ರೋ ಫಿನಿಶ್ ವಾಲ್ವಸ್ ಕಂಪನಿ ಚೇರ್ಮನ್ ತಿಲಕ ವಿಕ್ರಂಸಿ ಉದ್ಘಾಟಿಸಿದರು. ಕೆನರಾ ಬ್ಯಾಂಕ್ ವೃತ್ತ ಕಚೇರಿಯ ಡಿಜಿಎಂ ಜೆ.ಪಿ. ಪಾನಿಗ್ರಹಿ, ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಎಜಿಎಂ ಸಜಲ ಸಮೀರ ಅತಿಥಿಗಳಾಗಿದ್ದರು.

ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ, ಶೈಕ್ಷಣಿಕ ಸಾಲ ಹಾಗೂ ವಾಹನ ಸಾಲವನ್ನು ನೀಡುವ ಉದ್ದೇಶದಿಂದ ಆಯೋಜಿಸಿದ್ದ ಈ ಲೋನ್ ಮೇಳದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

ಕೆನರಾ ಬ್ಯಾಂಕ್​ನಿಂದ ನೀಡುವ ಕಡಿಮೆ ಬಡ್ಡಿ ದರದ ಸಾಲದ ಮಾಹಿತಿಯನ್ನು ಸಾರ್ವಜನಿಕರು ಪಡೆದರು. ಸಾಲಕ್ಕೆ ಬೇಕಾದ ದಾಖಲೆಗಳ ಬಗ್ಗೆ ಮಾಹಿತಿ ಪಡೆದು, ಕೆಲವರು ದಾಖಲೆಗಳನ್ನೂ ಒದಗಿಸಿದರು. ಲೋನ್ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂಧನೆ ದೊರೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net