ಆಟೋ ಎಕ್ಸ್​ಪೋಗೆ ಉತ್ತಮ ಸ್ಪಂದನೆ

Good response to Auto Expo
ವಿಜಯಪುರದ ಬಿಎಲ್​ಡಿಇ ಸಂಸ್ಥೆಯ ಫ.ಗು. ಹಳಕಟ್ಟಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಇವಿ&ಆಟೋ ಎಕ್ಸ್​ಪೋಗೆ ಪ್ರಾಚಾರ್ಯ ಡಾ. ವಿ.ಜಿ. ಸಂಗಮ ಚಾಲನೆ ನೀಡಿದರು. ಡಾ. ಲೀನಾ ರಾಗಾ, ಡಾ. ಪ್ರದಿಪ ಮಾಳಜಿ ಮತ್ತಿತರರಿದ್ದಾರೆ.
Published on

ವಿಜಯಪುರ: ನಮ್ಮ ವಿಜಯಪುರ ಜಿಲ್ಲೆಯನ್ನು ಹಸಿರು, ಮಾಲಿನ್ಯ ಮುಕ್ತಗೊಳಿಸಲು ಮತ್ತು ಜಾಗತಿಕ ತಾಪಮಾನ ಕಡಿಮೆ ಮಾಡಲು ನಿಟ್ಟಿನಲ್ಲಿ ಬಿಎಲ್​ಡಿಇ ಸಂಸ್ಥೆಯ ಅಧ್ಯರೂ ಆದ ಸಚಿವ ಡಾ. ಎಂ.ಬಿ. ಪಾಟೀಲರ ಮಾರ್ಗದರ್ಶನದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ವಿ.ಜಿ. ಸಂಗಮ ತಿಳಿಸಿದರು.

ನಗರದ ಬಿಎಲ್​ಡಿಇ ಸಂಸ್ಥೆಯ ಫ.ಗು. ಹಳಕಟ್ಟಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಇವಿ ಅಟೋ ಎಕ್ಸ್​ಪೋ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಸದ್ಯ ಆಯೋಜಿಸಿರುವ ಆಟೋ ಎಕ್ಸ್​ಪೋಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಮುಂದಿನ ದಿನಗಳಲ್ಲಿ ಪೆಟ್ರೋಲ್​, ಡಿಸೇಲ್​ ವಾಹನಗಳ ಬಳಕೆ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದರು.

ಯುವಕರಿಗೆ ಮತ್ತು ಸಾರ್ವಜನಿಕರಿಗೆ ವಿದ್ಯುತ್​ ಚಾಲಿತ ಎಲ್ಲ ಬ್ರಾಂಡ್​ಗಳ ವಾಹನಗಳನ್ನು ನೋಡುವ ಮತ್ತು ಪರೀೆ ಸವಾರಿ ಮಾಡುವ ಮುಕ್ತ ಅವಕಾಶ ಬಿಎಲ್​ಡಿಇ ಇಂಜಿನಿಯರಿಂಗ್​ ಕಾಲೇಜಿನ ಆವರಣದಲ್ಲಿ ಮಾಡಿದ್ದು ಬಹಳ ಸಾರ್ವಜನಿಕರಿಂದ ಮೆಚ್ಚುಗೆ ಪಾತ್ರವಾಯಿತು. ಅಲ್ಲದೆ, ಎಕ್ಸ್​ಪೋದಲ್ಲಿ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ, ಶ್ರೀರಾಮ ಫೈನಾನ್ಸ್​, ಬಿಎಲ್​ಡಿಇ ಸೌಹಾರ್ದ, ಸ್ಟಾಲ್​ ಸಿಬ್ಬಂದಿಗಳು ಗ್ರಾಹಕರಿಗೆ ವಿವರಣೆ ನೀಡುತ್ತಿದ್ದಾರೆ.

ಸಾರ್ವಜನಿಕರು ಎಕ್ಸ್​ಪೋ ನಡೆಯುತ್ತಿರುವ ಮಹಾವಿದ್ಯಾಲಯಕ್ಕೆ ಭೇಟಿಕೊಟ್ಟು ವೀಣೆ ಮಾಡಬಹುದು ಎಂದು ಪ್ರೊ. ಗುರುರಾಜ ಕರಡಿ ತಿಳಿಸಿದರು. ಡಾ. ವಿರೇಶ ಗೋನಾಳ, ಡಾ. ಲೀನಾ ರಾಗಾ, ಡಾ. ಪ್ರದಿಪ ಮಾಳಜಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net