ಕನ್ನಡ- ತೆಲುಗು ಭಾಷಿಕರ ನಡುವೆ ಉತ್ತಮ ಬಾಂಧವ್ಯ

ksou
Published on

ಮೈಸೂರು: ತೆಲುಗು ಮತ್ತು ಕನ್ನಡ ಭಾಷಿಕರ ನಡುವೆ ಮೊದಲಿನಿಂದಲೂ ಉತ್ತಮ ಬಾಂಧವ್ಯ ಇದೆ ಎಂದು ಕರ್ನಾಟಕ ರಾಜ್ಯಮುಕ್ತ ವಿಶ್ವವಿದ್ಯಾಲಯ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ ಹೇಳಿದರು.

ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಬಿಒಎಂ ಸಭಾಂಗಣದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ, ತೆಲುಗು ಅಧ್ಯಯನ ಮತ್ತು ಸಂಶೋಧನಾ ವಿಭಾಗ ವತಿಯಿಂದ ‘ಶಾಸ್ತ್ರೀಯ ಕನ್ನಡ- ತೆಲುಗು ಸಾಂಸ್ಕ ೃತಿಕ ಬಾಂಧವ್ಯ’ ವಿಷಯದ ಕುರಿತು ಬುಧವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ದಕ್ಷಿಣ ಭಾರತೀಯ ಭಾಷೆಗಳಲ್ಲಿ ಕನ್ನಡ ಮತ್ತು ತೆಲುಗು ನಡುವಿನ ಸಂಬಂಧ ಸುಧೀರ್ಘ ಕಾಲದ್ದು. ಕರ್ನಾಟಕದ ಜನರಿಗೆ ತೆಲುಗು ಪರಕೀಯ ಭಾಷೆಯಲ್ಲ. ಸಾಮಾಜಿಕ, ಸಾಂಸ್ಕೃತಿಕವಾಗಿ ಉಭಯ ರಾಜ್ಯಗಳ ನಡುವೆ ಉತ್ತಮ ಬಾಂಧವ್ಯ ಇದೆ ಎಂದು ಹೇಳಿದರು.

ಕನ್ನಡದ ಸರ್ವಶ್ರೇಷ್ಠ ವಚನಕಾರ ಸರ್ವಜ್ಞನ ಅವರ ಪ್ರಭಾವ ತೆಲುಗಿನ ವೇಮನನ ಮೇಲೆ, ಆದಿಕವಿ ಪಂಪನ ಪ್ರಭಾವ ತೆಲುಗಿನ ಶ್ರೇಷ್ಠ ಕವಿ ಶ್ರೀನಾಥನ ಅವರ ಮೇಲೆ, ಹಾಗೆಯೇ ತೆಲುಗಿನ ಶ್ರೀನಾಥನ ಅವರ ಪ್ರಭಾವ ಕನ್ನಡದ ಕವಿಗಳ ಮೇಲೆ ಆಗಿದ್ದರಿಂದ ಉತ್ಕೃಷ್ಟ ಸಾಹಿತ್ಯ ಮೂಡಿ ಬಂದಿದೆ. ಸಾಹಿತ್ಯದ ಕೊಡು-ಕೊಳ್ಳುವಿಕೆಯಲ್ಲಿ ಕನ್ನಡ ಮತ್ತು ತೆಲುಗು ಭಾಷೆ ನಡುವೆ ಉತ್ತಮ ಬಾಂಧವ್ಯವಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ. ತಳವಾರ್, ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಆರ‌್ವಿಯಸ್ ಸುಂದರಂ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರದ ಡೀನ್ ಪ್ರೊ.ಎಂ. ರಾಮನಾಥಂ ನಾಯ್ಡು, ಭಾರತೀಯ ಭಾಷಾ ಸಂಸ್ಥಾನ ನಿರ್ದೇಶಕ ಪ್ರೊ.ಶೈಲೆಂದ್ರ ಮೋಹನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net