ಜಿಲ್ಲೆಯಲ್ಲಿ 12 ಮಿ.ಮೀ ಮಳೆ ದಾಖಲು: ಬಿಸಿಲಿಗೆ ತಂಪೆರೆದ ವರುಣ

Good rainfall in the district Mandya
Published on

ಮಂಡ್ಯ: ಜಿಲ್ಲೆಯಲ್ಲಿ ಶನಿವಾರ ರಾತ್ರಿ ಜೋರು ಮಳೆಯಾಗಿದೆ. ಅಂತೆಯೇ 12 ಮಿ.ಮೀ ಪ್ರಮಾಣ ಮಳೆ ದಾಖಲಾಗಿದೆ.

ಬೆಳಗ್ಗೆಯಿಂದಲೂ ಬಿಸಿಲಿನ ತಾಪ ಹೆಚ್ಚಾಗಿತ್ತು. ಸಂಜೆಯಾಗುತ್ತಿದ್ದಂತೆ ಮೋಡ ಕವಿದ ವಾತಾವರಣದಂತಾಗಿ ಮಂಡ್ಯ ನಗರ ಸೇರಿದಂತೆ ಹಲವೆಡೆ ನಿರಂತರವಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಜೋರು ಮಳೆ ಸುರಿಯಿತು. ಬೇಸಿಗೆಗೆ ಬಸವಳಿದಿದ್ದ ಜನರಿಗೆ ತಂಪಿನ ಅನುಭವವಾಯಿತು. ಆದರೆ ಜೋರು ಗಾಳಿ ಹಾಗೂ ಮಳೆಯಿಂದಾಗಿ ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಯಿತು.

ಕೆ.ಆರ್.ಪೇಟೆ ತಾಲೂಕಿನಲ್ಲಿ 4.1 ಮಿ.ಮೀ, ಮದ್ದೂರಿನಲ್ಲಿ 31, ಮಳವಳ್ಳಿಯಲ್ಲಿ 14.5, ಮಂಡ್ಯದಲ್ಲಿ 10.5, ನಾಗಮಂಗಲದಲ್ಲಿ 13.1, ಪಾಂಡವಪುರದಲ್ಲಿ 6.7 ಹಾಗೂ ಶ್ರೀರಂಗಪಟ್ಟಣ ತಾಲೂಕಿನಲ್ಲಿ 1.7 ಮಿ.ಮೀ ಮಳೆಯಾಗಿದೆ. ಇನ್ನು ಭಾರತೀಯ ಹವಾಮಾನ ಇಲಾಖೆ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಮಾ.24 ಹಾಗೂ 26ರಂದು ತುಂತುರು ಮಳೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net