

ಮಡಿಕೇರಿ: ಜಿಲ್ಲೆಯ ವಿವಿಧೆಡೆ ಶನಿವಾರ ಉತ್ತಮ ಮಳೆಯಾಗಿದ್ದು, ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ಮಳೆ ೧೨.೧೦ ಮಿ.ಮೀ. ಮಳೆಯಾಗಿದೆ.
ಶನಿವಾರ ಮಧ್ಯಾಹ್ನ ಮಡಿಕೇರಿ ವ್ಯಾಪ್ತಿಯ ತಾಳತ್ತಮನೆ, ಉಡೋತ್‌ಮೊಟ್ಟೆ, ಬೆಟ್ಟಗೇರಿ, ಗಾಳಿಬೀಡು, ಮದೆನಾಡು, ಬೋಯಿಕೇರಿ, ಮಕ್ಕಂದೂರು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ನದಿ ತೊರೆಗಳ ನೀರಿನ ಮಟ್ಟ ಕ್ರಮೇಣ ಏರಿಕೆ ಕಂಡಬಂದಿದೆ.
ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೭.೦೫ ಮಿ.ಮೀ. ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೧೭.೨೦ ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೧೬.೧೧ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೧೨.೯೫ ಮಿ.ಮೀ., ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೭.೨೦ ಮಿ.ಮೀ. ಮಳೆಯಾಗಿದೆ.
ಜಿಲ್ಲೆಯಲ್ಲಿ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೯.೬೦, ನಾಪೋಕ್ಲು ೧೬.೨೦, ಸಂಪಾಜೆ ೧, ಭಾಗಮಂಡಲ ೧.೪೦, ವಿರಾಜಪೇಟೆ ಕಸಬಾ ೩೪.೪೦, ಹುದಿಕೇರಿ ೮.೪೦, ಶ್ರೀಮಂಗಲ ೧, ಪೊನ್ನಂಪೇಟೆ ೩೫, ಬಾಳೆಲೆ ೨೦.೦೩, ಸೋಮವಾರಪೇಟೆ ಕಸಬಾ ೧೨.೪೦, ಶನಿವಾರಸಂತೆ ೪.೨೦, ಶಾಂತಳ್ಳಿ ೨೬, ಕೊಡ್ಲಿಪೇಟೆ ೯.೨೦, ಕುಶಾಲನಗರ ೦.೪೦, ಸುಂಟಿಕೊಪ್ಪ ೧೪ ಮಿ.ಮೀ.ಮಳೆಯಾಗಿದೆ.
ಹಾರಂಗಿ ಜಲಾಶಯದ ನೀರಿನ ಗರಿಷ್ಠ ಮಟ್ಟ ೨,೮೫೯ ಅಡಿಗಳಿದ್ದು, ಶನಿವಾರ ೨೮೨೨.೯೮ ಅಡಿ ನೀರು ಸಂಗ್ರಹವಾಗಿದೆ. ನೀರಿನ ಒಳಹರಿವು ೩೦೮ ಕ್ಯೂಸೆಕ್ ಇದ್ದರೆ, ಹೊರ ಹರಿವು ನದಿಗೆ ೨೦೦ ಕ್ಯೂಸೆಕ್ ನೀರು ಬಿಡಲಾಗುತ್ತಿದೆ.