ಸಂವೇದನಾಶೀಲತೆಯಿಂದ ಉತ್ತಮ ಕವನ ರಚನೆ

KAVAN SANKALAN
Published on

ಅಂಕೋಲಾ: ಮಹಿಳೆಯಲ್ಲಿರುವ ಸಂವೇದನಾಶೀಲತೆ ಉತ್ತಮ ಕವನವನ್ನು ರಚಿಸಲು ಸಾಧ್ಯವಾಗುತ್ತದೆ. ಭುವಿಯ ಬಂಧ ಕವನ ಸಂಕಲನದಲ್ಲಿ ಮನುಷ್ಯ ಮತ್ತು ಪ್ರಕೃತಿಯ ಸಂಬಂಧ, ಮಾನವೀಯ ಸಂಬಂಧ ಭೂಮಿಯ ರಕ್ಷಣೆ, ಕುಶಲಕರ್ಮಿಗಳ ಮೂಲ ಕಸುಬುಗಳ ಮಹತ್ವ ವಿಷಯಗಳು ಕುರಿತು ಸೊಗಸಾಗಿ ವರ್ಣಿಸಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಆರ್.ಜಿ. ಗುಂದಿ ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಂಕೋಲಾ ಘಟಕ ಮತ್ತು ಪ್ರಕೃತಿ ಪ್ರಕಾಶನ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶುಭಲಕ್ಷ್ಮೀ ನಾಯಕರ ಭುವಿಯ ಬಂಧ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕಾವ್ಯ ಮತ್ತು ಸಾಹಿತ್ಯ ಎಲ್ಲರನ್ನು ಒಂದುಗೂಡಿಸುತ್ತದೆ. ಹೀಗಾಗಿ, ಇನ್ನೂ ಹೆಚ್ಚಿನ ಸಾಹಿತ್ಯ ಕೃಷಿಯಾಗಲಿ ಎಂದರು.

ಕವಯತ್ರಿ ಶುಭಲಕ್ಷ್ಮೀ ನಾಯಕ ಮಾತನಾಡಿ, ಜೀವನದಲ್ಲಿ ಕಂಡ ನೋವು-ನಲಿವುಗಳೇ ನನ್ನ ಕವನಗಳಾಗಿ ಹೊರಹೊಮ್ಮಿವೆ. ಸಾಹಿತ್ಯ ಸಿಂಧುಗಳಲ್ಲಿ ಒಂದು ಬಿಂದುವಾಗಿ ಬರೆದಿದ್ದೇನೆ ಎಂದರು.

ಕಸಾಪ ಅಂಕೋಲಾ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ಮಹೇಶ ನಾಯಕ, ಸುಭಾಶ ಕಾರೇಬೈಲ್ ಮಾತನಾಡಿದರು.

ಕೃಷಿಕ ರಾಮಚಂದ್ರ ನಾಯಕ, ಸಾಹಿತಿ ವಿಠ್ಠಲ ಗಾಂವಕರ, ನಾಗೇಂದ್ರ ನಾಯಕ ತೊರ್ಕೆ, ಜೆ. ಪ್ರೇಮಾನಂದ, ಜಯಶೀಲ ಆಗೇರ, ಎಂ.ಬಿ. ಆಗೇರ, ಜಿ.ಆರ್. ನಾಯಕ, ರಾಜೇಂದ್ರ ಕೇಣಿ, ಇಂದಿರಾ ನಾಯಕ, ಹೊನ್ನಮ್ಮ ನಾಯಕ, ಚಂದ್ರಕಲಾ ನಾಯಕ, ಭವಾನಿ ನಾಯಕ ಉಪಸ್ಥಿತರಿದ್ದರು. ಕಸಾಪ ಕಾರ್ಯದರ್ಶಿ ಜಗದೀಶ ನಾಯಕ ಹೊಸ್ಕೇರಿ, ಸಾಹಿತಿ ಮಹಾಂತೇಶ ರೇವಡಿ, ಕಾರ್ಯದರ್ಶಿ ಜಿ.ಆರ್. ತಾಂಡೇಲ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net