

ವಿಜಯಪುರ : ತಾಲೂಕಿನ ಕವಲಗಿ ಗ್ರಾಮದ ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆಯ ವಿದ್ಯಾರ್ಥಿಗಳು ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ದಸರಾ ಪಂದ್ಯಾವಳಿಯ ತಾಲೂಕು ಮಟ್ಟದ ಯೋಗ ಸ್ಪರ್ಧೆಯಲ್ಲಿ ಉತ್ತಮ ಸಾಧನೆಗೈದಿದ್ದಾರೆ. ಶಾಲೆಯ ವಿದಾರ್ಥಿಗಳಾದ ಮಧುಶ್ರೀ ಹಿರೇಮಠ ಸಾಂಪ್ರದಾಯಿಕ, ಶಾಸಿಯ ಮತ್ತು ಲಯಬದ್ಧ ಯೋಗದಲ್ಲಿ ಪ್ರಥಮ, ನವೀನ ಸರಸಂಬಿ ಲಯಬದ್ಧ ಜೋಡಿ ಮತ್ತು ಕಲಾತ್ಮಕದಲ್ಲಿ ಪ್ರಥಮ ಹಾಗೂ ಸಾಂಪ್ರದಾಯಿಕ ಯೋಗದಲ್ಲಿ ದ್ವೀತಿಯ ಹಾಗೂ ಕೃತಿಕ ರೆಡ್ಡಿ ಲಯಬದ್ಧ ಜೋಡಿ ಮತ್ತು ಕಲಾತ್ಮಕದಲ್ಲಿ ಪ್ರಥಮ ಹಾಗೂ ಸಾಂಪ್ರದಾಯಿಕ ತೃತೀಯ ಸ್ಥಾನ ಪಡೆಯುವ ಮೂಲಕ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
* ಫೋಟೋ : ಎಂಎಂ 5&4
ವಿಜಯಪುರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಯೋಗ ಸ್ಫರ್ಧೆಯಲ್ಲಿ ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆಯ ವಿದ್ಯಾರ್ಥಿನಿ ಯೋಗ ಪ್ರದರ್ಶನದ ಭಂಗಿ.
**