ಮ್ಯಾರಥಾನ್​ನಲ್ಲಿ ಉತ್ತಮ ಸಾಧನೆ

Good performance in the marathon
Published on

ವಿಜಯಪುರ : ರಾಜ್ಯ ಏಡ್ಸ್​ ನಿಯಂತ್ರಣ ಸಂಸ್ಥೆ, ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್​ಎಸ್​ಎಸ್​ ಟಕ, ರೆಡ್​ ರಿಬ್ಬನ್​ ಕ್ಲಬ್​ಗಳ ವತಿಯಿಂದ ನಗರದ ಐತಿಹಾಸಿಕ ಗೋಲ್​ ಗುಂಬಜ್​ ಆವರಣದಲ್ಲಿ 2025ರ ಯುವ ಜನೋತ್ಸವದ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡ ಮ್ಯಾರಥಾನ್​ನಲ್ಲಿ ಇಲ್ಲಿನ ಎ.ಎಸ್​. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.

ಕಾಲೇಜಿನ ಸುಮಾರು 25ಕ್ಕೂ ಅಧಿಕ ಎನ್​ಎಸ್​ಎಸ್​ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಕ್ಕೆ ಜಿಲ್ಲಾ ಯರೋಗ ನಿಯಂತ್ರಣ ಅಧಿಕಾರಿ ಡಾ. ಮಲ್ಲನಗೌಡ ಪಾಟೀಲ, ಜಿಲ್ಲಾ ಶಸಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ ಪ್ರಶಂಶಿಸಿದ್ದಾರೆ. ಎನ್​ಎಸ್​ಎಸ್​ ಅಧಿಕಾರಿ ವಿಜಯಕುಮಾರ ತಳವಾರ, ಪ್ರದಿಪ ಕುಂಬಾರ ಮತ್ತಿತರರಿದ್ದರು.

ಯುವ ಜನೋತ್ಸವದ ಅಂಗವಾಗಿ ನಡೆದ ಮ್ಯಾರಥಾನ್​ನಲ್ಲಿ ಸಾಧನೆಗೈದ ವಿಜಯಪುರದ ಎ.ಎಸ್​. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಕಾಲೇಜಿಬನ ಸಿಬ್ಬಂದಿಗಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net