ಕೆಎಲ್​ಎಸ್ ವಿಡಿಐಟಿ ತಂಡ ಉತ್ತಮ ಸಾಧನೆ

Basket ball winners
Published on

ಹಳಿಯಾಳ: ಯಾವಾಗಲೂ ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಕ್ರೀಡೆಗಳಲ್ಲಿ ಸ್ಪರ್ಧಿಸಬೇಕು ಎಂದು ಹಳಿಯಾಳದ ಕೆಎಲ್​ಎಸ್​ ವಿಡಿಐಟಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ಹೇಳಿದರು.

ಪಟ್ಟಣದ ಕೆಎಲ್​ಎಸ್​ವಿಡಿಐಟಿ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ ಮಹಿಳಾ ವಿಭಾಗದ ಬಾಸ್ಕೆಟ್ ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರೊ. ಮಂಜುನಾಥ, ಡಾ. ಮಹೇಂದ್ರ ದೀಕ್ಷಿತ್, ಡಾ ಆಶಿಕ್ ಬಳ್ಳಾರಿ, ಪ್ರೊ. ಎಸ್.ಡಿ. ಕುಲಕರ್ಣಿ ಇದ್ದರು.

ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಎನ್​ಐಇ ಮೈಸೂರು, ಎಸ್​ಡಿಎಂಸಿಇಟಿ ಧಾರವಾಡ, ಎಸ್​ಜೆಸಿಇ ಮಂಗಳೂರು ಹಾಗೂ ವಿಡಿಐಟಿ ಹಳಿಯಾಳ ಬೆಂಗಳೂರಿನಲ್ಲಿ ನಡೆಯಲಿರುವ ಮುಂದಿನ ಸುತ್ತಿನ ಪಂದ್ಯಾವಳಿಗೆ ಆಯ್ಕೆಯಾಗಿದೆ.

ಕೆಎಲ್​ಎಸ್ ವಿಡಿಐಟಿ ತಂಡವನ್ನು ಸೌಭಾಗ್ಯ ಎ., ಸಂಜನಾ ಡಿ., ಸುಪ್ರೀತಾ ಎಚ್., ಶ್ರೀಲಕ್ಷ್ಮಿ ಎಂ., ಉಮಾ ಎಚ್., ಸ್ನೇಹಾ ಡಿ., ನಿಕಿತಾ ಕೆ., ಶ್ರಾವಣಿ ಎಸ್., ಮೇಘಾ ಪಿ. ಪ್ರತಿನಿಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net