

ಗೋಳಿಯಂಗಡಿ: ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ವೃತ್ತಿ ಮಾರ್ಗದರ್ಶನ ಪ್ರಯೋಜನವಾಗಲಿದೆ. ಅಗ್ನಿಪಥ ಸೈನಿಕ ಹುದ್ದೆಗೆ ಸೇರ್ಪಡೆಗೊಂಡರೆ ಉತ್ತಮ ಅವಕಾಶಗಳಿದ್ದು, ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಸ್ಥಾಪಾಕಾಧ್ಯಕ್ಷ ಬಿ.ರಾಜೇಂದ್ರ ಕಿಣಿ ಬೆಳ್ವೆ ಹೇಳಿದರು.
ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ವತಿಯಿಂದ ಬಾರ್ಕೂರು ರುಕ್ಮೀಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಬಾರ್ಕೂರು ಸಿಕ್ಯೂಎಸಿ ಪ್ಲೇಸ್‌ಮೆಂಟ್ ಸೆಲ್ ಮತ್ತು ಎನ್‌ಸಿಸಿ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಅಗ್ನಿಪಥ ಸೈನಿಕ ಸೇರ್ಪಡೆೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಬ್ರಹ್ಮಾವರ ಸರ್ಕಾರಿ ಪೂರ್ವ ಕಾಲೇಜು ಉಪನ್ಯಾಸಕಿ ಸವಿತಾ ಎರ್ಮಾಳ್ ಅಗ್ನಿಪಥ ಯೋಜನೆ ಕುರಿತು ಮಾಹಿತಿ ನೀಡಿದರು. ಪ್ರಾಂಶುಪಾಲ ಪ್ರೊ.ಭಾಸ್ಕರ ಶೆಟ್ಟಿ ಎಸ್. ಅಧ್ಯಕ್ಷತೆ ವಹಿಸಿದರು. ಲಯನ್ಸ್ ಕ್ಲಬ್ 3ರ ವಲಯಾಧ್ಯಕ್ಷ ಎಚ್.ವಸಂತಕುಮಾರ್ ಶೆಟ್ಟಿ ಬೆಳ್ವೆ, ಅಣ್ಣಯ್ಯ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ ಯಳಂತೂರು, ಪತ್ರಕರ್ತ ಕೆ.ಸಂಜೀವ ಆರ್ಡಿ, ಉಪನ್ಯಾಸಕರು ಉಪಸ್ಥಿತರಿದ್ದರು. ಶೋಭಾ ಆರ್. ಸ್ವಾಗತಿಸಿದರು. ಲಕ್ಷಿತ್ ಪೂಜಾರಿ ವಂದಿಸಿದರು. ರೋಹಿಣಿ ಎಚ್.ಬಿ ಕಾರ್ಯಕ್ರಮ ನಿರೂಪಿಸಿದರು.