

ಬೆಂಗಳೂರು: ಶಿಕ್ಷಕ ಹುದ್ದೆ ಆಕಾಂಗಳಿಗೆ ವಯೋಮಿತಿ ಮತ್ತು ಅಂಕಮಿತಿ ಸಡಿಲಗೊಳಿಸುವ ಮೂಲಕ ರಾಜ್ಯ ಸರ್ಕಾರ 75ನೇ ಸ್ವಾತಂತ್ರ್ಯೋತ್ಸವದ ಬಂಪರ್ ಕೊಡುಗೆ ಪ್ರಕಟಿಸಿದೆ.
ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿಧಿಸಲಾದ ಲಾಕ್ಡೌನ್ನಿಂದ ಯಾವುದೇ ನೇಮಕಾತಿ ನಡೆಯದೇ ಸಾಕಷ್ಟು ವಿದ್ಯಾವಂತ ನಿರುದ್ಯೋಗಿಗಳು ವಯೋಮಿತಿ ಮೀರುವ ಆತಂಕದಲ್ಲಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಶಾಲಾ ಶಿಣ ಹಾಗೂ ಸಾರತಾ ಇಲಾಖೆಯ ಶಿಕ್ಷಕರ ನೇಮಕಾತಿಗಳು ವಿಳಂಬವಾಗಿವೆ. ಮೂರು ವರ್ಷ ನೇಮಕ ನಡೆಸದೆ ಇದ್ದುದರಿಂದ ಬಿ.ಇಡಿ ಮತ್ತು ಟಿಇಟಿ ಪರೀಕ್ಷೆ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ 2 ವರ್ಷ ವಯೋಮಿತಿಯನ್ನು ಸಡಿಲಗೊಳಿಸಲು ವಿಶೇಷ ನಿಯಮ ರಚಿಸಲಾಗಿದೆ.
ವಿಷಯ ಸಮೂಹಗಳಿಗೆ ಸೇರ್ಪಡೆ:
ಅಧಿಸೂಚಿತ ಹುದ್ದೆಗಳ ಪೈಕಿ ಶೇ.1 ಹುದ್ದೆಗಳನ್ನು ತೃತೀಯಲಿಂಗಿಗಳಿಂದ ತುಂಬುವುದು. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8ನೇ ತರಗತಿ) ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಪದವೀಧರ ಭಾಷಾ ಶಿಕ್ಷಕರ ನೇಮಕಾತಿಗೆ ನಿಗದಿಪಡಿಸಲಾದ ಭಾಷಾ ಐಚ್ಛಿಕ ವಿಷಯಗಳ ಸಮೂಹದೊಂದಿಗೆ ಸಮಾಜಶಾಸ್ತ್ರವನ್ನು ಹಾಗೂ ಗಣಿತ ಮತ್ತು ವಿಜ್ಞಾನ ಸಮೂಹದಲ್ಲಿ ಭೂಗರ್ಭಶಾಸ್ತ್ರವನ್ನು, ಜೀವ ವಿಜ್ಞಾನ ವಿಷಯದ ಸಮೂಹದೊಂದಿಗೆ ಜೈವಿಕ ತಂತ್ರಜ್ಞಾನ ವಿಷಯವನ್ನು ಸೇರ್ಪಡೆ ಮಾಡಲಾಗುತ್ತಿದೆ.
ಶೇ.20 ರಷ್ಟು ಹೆಚ್ಚುವರಿ ಪಟ್ಟಿ
ನೇಮಕ ಅಧಿಸೂಚನೆಯಲ್ಲಿ ಪ್ರಕಟಿಸಿದ ಹುದ್ದೆಗಳ ಸಂಖ್ಯೆಯ ಶೇ.20 ಮೀರದಂತೆ ಮುಖ್ಯ ಆಯ್ಕೆ ಪಟ್ಟಿಯಲ್ಲಿ ಇಲ್ಲದ ಅಭ್ಯರ್ಥಿಗಳ ಹೆಚ್ಚುವರಿ ಪಟ್ಟಿ ಸಿದ್ಧಪಡಿಸಲಾಗುವುದು. ಈ ಪಟ್ಟಿಯನ್ನು 2 ವರ್ಷಗಳ ವರೆಗೆ ಅಥವಾ ಮುಂದಿನ ನೇಮಕ ಅಧಿಸೂಚನೆ ಹೊರಡಿಸುವವರೆಗೆ ಯಾವುದು ಮೊದಲೋ ಅಲ್ಲಿಯವರಿಗೆ ಚಾಲ್ತಿಯಲ್ಲಿಡಲು ಅವಕಾಶ ನೀಡಲಾಗಿದೆ.
63 ಕೋಟಿ ವೆಚ್ಚ
ರಾಜ್ಯದಲ್ಲಿ ಖಾಲಿ ಇರುವ ಪದವೀಧರ ಪ್ರಾಥಮಿಕ ಶಾಲಾ (6-8ನೇ ತರಗತಿ) ಶಿಕ್ಷಕರ 15,000 ಹುದ್ದೆಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಇದಕ್ಕಾಗಿ ಮಾಸಿಕ 63,78,15,000 ರೂ. ವೆಚ್ಚ ಅಂದಾಜಿಸಲಾಗಿದೆ.
ಕನಿಷ್ಟ ಅಂಕಗಳೂ ಇಳಿಕೆ
ಕೆಪಿಎಸ್ಸಿಯಿಂದ ನಡೆಯುವ ನೇಮಕದಲ್ಲಿ ಕನಿಷ್ಠ ಅಂಕ ನಿಗದಿಪಡಿಸಿ ಕಟ್ ಆ್ ಮಾರ್ಕ್ಸ್ ಎಂದು ನಿಗದಿಪಡಿಸಲಾಗುತ್ತಿತ್ತು. ಸಹಜವಾಗಿಯೇ ಈ ಅಂಕಗಳಿಗಿಂತ ಕಡಿಮೆ ಇದ್ದವರು ಶಿಕ್ಷಕರಾಗಿ ನೇಮಕಗೊಳ್ಳದೆ ಹುದ್ದೆಗಳು ಖಾಲಿ ಉಳಿಯುತ್ತಿದ್ದವು. ಈಗ ಕಟ್ ಆ್ ಮಾರ್ಕ್ಸ್ನ್ನು 60 ರಿಂದ 50ಕ್ಕೆ ಇಳಿಸಿದ್ದೇವೆ. ಅಷ್ಟೇ ಅಲ್ಲ, ಈ ಅಂಕಗಳಿಗೂ ಖಾಲಿ ಹುದ್ದೆ ಭರ್ತಿಯಾಗದೇ ಇದ್ದರೆ ಇನ್ನೊಂದು ಕಟ್ ಆ್ ಅಂಕ ನಿಗದಿ ಮಾಡಿ ಶಿಕ್ಷಕರ ಹುದ್ದೆ ಭರ್ತಿ ಮಾಡುವಂತೆ ಕೆಪಿಎಸ್ಸಿಗೆ ಸೂಚನೆ ಕೊಟ್ಟಿದ್ದೇವೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಯಾವ ವರ್ಗಕ್ಕೆ ಎಷ್ಟು ವಯೋಮಿತಿ?
*ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 47 ವರ್ಷ
*ಪ್ರವರ್ಗ-2ಎ, 2ಬಿ, 3ಎ, 3ಬಿ ಪ್ರವರ್ಗದ ಅಭ್ಯರ್ಥಿಗಳಿಗೆ 45 ವರ್ಷ
*ಸಾಮಾನ್ಯ ಅಭ್ಯರ್ಥಿಗಳಿಗೆ 42 ವರ್ಷ
ಕೋವಿಡ್ ಕಾರಣ ಶಿಕ್ಷಕರ ನೇಮಕ ನಡೆದಿಲ್ಲ. ಹೀಗಾಗಿ ಅನೇಕ ಅಭ್ಯರ್ಥಿಗಳ ವಯೋಮಿತಿ ಮೀರಿ ನೇಮಕಾತಿಯಿಂದ ವಂಚಿತರಾಗುತ್ತಿದ್ದಾರೆ ಎಂಬ ಮನವಿಯನ್ನು ಪುರಸ್ಕರಿಸಿ ಸರ್ಕಾರ 2 ವರ್ಷ ವಯೋಮಿತಿ ಸಡಿಲ ಹಾಗೂ ಅಂಕಮಿತಿ ಇಳಿಸಲು ತೀರ್ಮಾನಿಸಿದೆ.
-ಜೆ.ಸಿ. ಮಾಧುಸ್ವಾಮಿ, ಕಾನೂನು ಮತ್ತು ಸಂಸದೀಯ ಸಚಿವ