ಅತಿಥಿ ಉಪನ್ಯಾಸಕರಿಗೆ ಗುಡ್‌ನ್ಯೂಸ್

vidhanasoudha
Published on

ಬೆಂಗಳೂರು : ಕರೊನಾದಿಂದ ಕಂಗೆಟ್ಟಿದ್ದ ಅತಿಥಿ ಉಪನ್ಯಾಸಕರಿಗೆ ಸರ್ಕಾರ ಶುಭ ಸುದ್ದಿ ನೀಡಿದೆ. ಕಳೆದ ವಾರವಷ್ಟೇ ಐದು ತಿಂಗಳ ಬಾಕಿ ವೇತನ ಪಾವತಿ ಮಾಡಿದ್ದ ಸರ್ಕಾರ ಇದೀಗ, ಅವರ ಸೇವೆ ವರ್ಷದ ಮಟ್ಟಿಗೆ ಮುಂದುವರಿಸಿ ಆದೇಶಿಸಿದೆ.

ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ 2019-20ನೇ ಸಾಲಿನಲ್ಲಿ ಕಾರ್ಯನಿರ್ವಹಿಸಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು 2020-21ನೇ ಸಾಲಿಗೂ ಮುಂದುವರಿಸಿ ಸೋಮವಾರ ಆದೇಶ ಹೊರಡಿಸಿದೆ.

ಕೋವಿಡ್-19 ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಸೇವೆ ಅಗತ್ಯವಾಗಿದ್ದು, ಹೀಗಾಗಿ ಅವರನ್ನು ಇನ್ನೊಂದು ಅವಧಿಗೆ ಮುಂದುವರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ 14 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿದ್ದು, ಕರೊನಾ ಲಾಕ್‌ಡೌನ್‌ನಿಂದಾಗಿ ಅವರೆಲ್ಲ ಜೀವನ ನಡೆಸುವುದೇ ಕಷ್ಟವಾಗಿ ಪರದಾಡಿದ್ದರು. ವೇತನವೂ ಇಲ್ಲದೇ, ಭವಿಷ್ಯವೂ ಮಸುಕಾಗಿತ್ತು. ಕೆಲವು ತರಕಾರಿಯನ್ನೂ ಮಾರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net