

ಸುಂಟಿಕೊಪ್ಪ: ಕ್ರಿಸ್‌ಮಸ್ ಅಂಗವಾಗಿ ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ವತಿಯಿಂದ ಧರ್ಮಗುರು, ಸಂತ ಕ್ಲಾರ ಕಾನ್ವೆಂಟಿನ ಸಿಸ್ಟರ್‌ಗಳು, ಸಾಂತಾಕ್ಲಾಸ್ ವೇಷಧಾರಿ, ಯುವಕ, ಯುವತಿಯರು, ಕ್ಯಾರೋಲ್ಸ್ ವೃಂದದವರು ಕ್ರೈಸ್ತರ ಮನೆಗಳಿಗೆ ತೆರಳಿ ಪ್ರಾರ್ಥನೆ ಗಾಯನಗಳನ್ನು ಹಾಡುತ್ತಾ ಹಬ್ಬದ ಶುಭ ಸಂದೇಶ ಸಾರುತ್ತಿದ್ದಾರೆ.
ಸುಂಟಿಕೊಪ್ಪ ದೇವಾಲಯದಲ್ಲಿ ಕ್ರೈಸ್ತ ಧರ್ಮಗುರುಗಳು, ಬಾಂಧವರು ಕ್ರಿಸ್‌ಮಸ್ ಆಚರಣೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ದೇವಾಲಯದಲ್ಲಿ ಕ್ರಿಸ್ತ ಜನಿಸಿದ ಸ್ಥಳ ದನದಕೊಟ್ಟಿಗೆ ನಿರ್ಮಾಣದೊಂದಿಗೆ ಅಲಂಕಾರಗೊಳಿಸಲು ಸಜ್ಜಾಗುತ್ತಿದ್ದಾರೆ. ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರು ರೇವರೆಂಡ್ ಫಾದರ್ ಅರುಳ್ ಸೆಲ್ವಕುಮಾರ್, ಸಹಾಯಕ ಧರ್ಮಗುರು ಫಾದರ್ ನವೀನ್‌ಕುಮಾರ್, ಸಾಂತಾಕ್ಲಾಸ್ ವೇಷಧಾರಿ, ದೇವಾಲಯದ ಪಾಲಾನ ಸಮಿತಿಯ ಪದಾಧಿಕಾರಿಗಳು ಮನೆ ಮನೆಗೆ ತೆರಳಿ ಪ್ರಾರ್ಥನೆ ಗಾಯನ ಹಾಡುತ್ತಾ ಶುಭ ಸಂದೇಶ ವಾಚಿಸಿದ್ದಾರೆ.