ಸೃಜನಶೀಲ ಕಾರ್ಯಕ್ರಮಗಳಿಂದ ಉತ್ತಮ ಸಂದೇಶ

samarop
Published on

ಗಂಗೊಳ್ಳಿ: ಸಂಸ್ಕಾರ ಭರಿತ ಸೃಜನಶೀಲ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಸಾಧ್ಯ ಎಂದು ಶಾಸಕ ಸಿಮೆಂಟ್ ಮಂಜು ಅಭಿಪ್ರಾಯಪಟ್ಟರು.

ನಾಯಕವಾಡಿ ಗುಜ್ಜಾಡಿಯ ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲದ ಸುವರ್ಣ ಸಂಗಮ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕೊಲ್ಲೂರು ಪೊಲೀಸ್ ಠಾಣೆ ಉಪನಿರೀಕ್ಷಕಿ ಸುಧಾರಾಣಿ ಉದ್ಘಾಟಿಸಿದರು. ಉದ್ಯಮಿ ವಿನೋದ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವಲಯದ ಸಾಧಕರನ್ನು ಸನ್ಮಾನಿಸಲಾಯಿತು. ಶಾಸಕ ಗುರುರಾಜ್ ಗಂಟಿಹೊಳೆ, ಉದ್ಯಮಿಗಳಾದ ಶಿವ ಆರ್.ಪೂಜಾರಿ, ಕೆ.ರಾಮನಾಥ್ ನಾಯಕ್ ಗಂಗೊಳ್ಳಿ, ವಾಸುದೇವ ಶೇರುಗಾರ್, ಉಪನ್ಯಾಸಕ ನರೇಂದ್ರ ಎಸ್.ಗಂಗೊಳ್ಳಿ, ಬೆಣ್ಗೆರೆ ಶ್ರೀ ನಾಗ ದೇವಸ್ಥಾನ ಅಧ್ಯಕ್ಷ ಉಮೇಶ್ ಎಲ್.ಮೇಸ್ತ, ಸಂಗಮೇಶ್ವರ ದೇವಸ್ಥಾನ ಪ್ರಧಾನ ಕಾರ್ಯದರ್ಶಿ ನಾರಾಯಣ ಕೆ.ಗುಜ್ಜಾಡಿ, ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಉಪಾಧ್ಯಕ್ಷ ದಿನಕರ್ ಬಾಬು ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀನಿವಾಸ ಕೆ. ಉಪಸ್ಥಿತರಿದ್ದರು. ನಾಗರಾಜ್ ಎನ್.ಡಿ. ಸ್ವಾಗತಿಸಿದರು. ಯುವಕ ಮಂಡಲ ಅಧ್ಯಕ್ಷ ಶ್ರೀಧರ ಎನ್. ಪ್ರಾಸ್ತಾವಿಕ ಮಾತನಾಡಿದರು. ಪಡುಕೋಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಆನಂದ ಜಿ. ಸನ್ಮಾನಿತರನ್ನು ಪರಿಚಯಿಸಿದರು. ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರೂಪಿಸಿದರು. ನಿತೇಶ್ ಎನ್.ಡಿ. ವಂದಿಸಿದರು.

ನಮ್ಮಲ್ಲಿರುವ ಸಾಮರ್ಥ್ಯ ಅರ್ಥ ಮಾಡಿಕೊಂಡು ಬೆಳೆದರೆ ಇಡೀ ಸಮಾಜ ತಿರುಗಿ ನೋಡುವಂತಹ ಅದ್ಭುತ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ. ಇದಕ್ಕೆ ಶ್ರೀ ಚೆನ್ನಬಸವೇಶ್ವರ ಯುವಕಮಂಡಲ ಸಾಕ್ಷಿ. -ಗುರುರಾಜ್ ಗಂಟಿಹೊಳೆ ಶಾಸಕ https://www.vijayavani.net/installation-of-a-wooden-image-of-goddess-durga-at-the-katbelthur-temple https://www.vijayavani.net/action-for-sanction-of-rights

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net