

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಶೌರ್ಯ, ಸಾಹಸ ಇಂದಿನ ಯುವಕರಿಗೆ ಮಾದರಿಯಾಗಬೇಕಿದೆ ಎಂದು ಕನಕ ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಕೆ.ಎಸ್.ಲೋಕೇಶ್ ಎಂದರು.
ನಗರದ ಗಾಂಧಿನಗರ ಪರ್ವತಪ್ಪ ಬಡಾವಣೆಯ ಸಂಗೊಳ್ಳಿ ರಾಯಣ್ಣ ಉದ್ಯಾನವನದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನ ಬಳಗದಿಂದ \ ಆಯೋಜಿಸಿದ್ದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಪ್ರತಿಮ ದೇಶಭಕ್ತನಾಗಿದ್ದ ರಾಯಣ್ಣ, ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟ ಯುವ ಸಮೂಹಕ್ಕೆ ಪ್ರೇರಣೆಯಾಗಲಿದೆ. ಕಿತ್ತೂರು ಸಂಸ್ಥಾನದ ಉಳಿವಿಗಾಗಿ ಹೋರಾಟ ನಡೆಸಿ ಮಹನೀಯನಾಗಿದ್ದಾರೆ. ಇಂತಹ ಮಹನೀಯನ ರಾಷ್ಟ್ರಪ್ರೇಮ ಈಗಿನ ಯುವಕರು ಅಳವಡಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಕನಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಬಿ.ಎಸ್.ಲೋಕೇಶ್, ಅಭಿಮಾನಿ ಬಳಗ ಅಧ್ಯಕ್ಷ ಕೆ.ನಾಗರಾಜು, ಮುಖಂಡ ನಾಗೆಶ್ ಸುರೇಶ್, ನ್ಯೂ ಸೆಂಚುರಿ ಶಾಲೆ ಮುಖ್ಯ ಶಿಕ್ಷಕಿ ಅಕ್ಷತಾ ಎನ್.ಕರ್ಣಿಕ್, ಶಿಕ್ಷಕಿ ಕೆ.ಎಸ್.ಶೈಲಾ, ಸುಮಿತ್ರಾ, ಸುಚಿತ್ರಾ, ಲತಾ, ಪೂಜಾ, ಭಾರ್ಗವಿ, ಜಯಶ್ರೀ, ರಮ್ಯಾ ಇದ್ದರು.