ಉತ್ತಮ ಭವಿಷ್ಯ ಕಟ್ಟಿಕೊಳ್ಳಲಿ

4CHikkodigrameen1
Published on

ಚಿಕ್ಕೋಡಿ ಗ್ರಾಮೀಣ: ವಿದ್ಯಾರ್ಥಿಗಳು ಗುರುಗಳು, ಪಾಲಕರ ಮಾರ್ಗದರ್ಶನದಲ್ಲಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು. ಗುರು&ಶಿಷ್ಯ ಪರಂಪರೆ ಕಾಪಾಡಿಕೊಂಡು ಶಾಲೆ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಿಕ್ಷಕ ಸಿದರಾಮ ಕರಜಗೆ ಹೇಳಿದರು.

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಮರಾಠಾಭವನದಲ್ಲಿ ಛತ್ರಪತಿ ಗ್ರೂಪ್​ ಹಾಗೂ ಲೋಕ ಕಲ್ಯಾಣ ಕ್ರೆಡಿಟ್​ ಸಹಕಾರಿ ಆಶ್ರಯದಲ್ಲಿ ಈಚೆಗೆ ಆಯೋಜಿಸಲಾಗಿದ್ದ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಸೈನಿಕ ವಿಶ್ವನಾಥ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಭವ್ಯ ಭಾರತದ ಶಿಲ್ಪಿಗಳಾಗುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.

ವಿದ್ಯಾರ್ಥಿಗಳು, ಎಂಬಿಬಿಎಸ್​ ಪದವೀಧರರು, ವೀರಶೈವ ಲಿಂಗಾಯತ ಸಂಟನೆ ತಾಲೂಕಾಧ್ಯಕ್ಷ ಪಂಚಾಕ್ಷರಿ ಮಠಪತಿ ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು. ಲೋಕ ಕಲ್ಯಾಣ ಕ್ರೆಡಿಟ್​ ಸಹಕಾರಿಯ ದ್ವೀತಿಯ ವಾರ್ಷಿಕ ಸಭೆ ಜರುಗಿತು. ಉಪನ್ಯಾಸಕ ಅಮಿತ ಇನಾಮದಾರ, ಲೋಕ ಕಲ್ಯಾಣ ಸಹಕಾರಿ ಸಂಸ್ಥೆಯ ಸಂಸ್ಥಾಪಕ ನಿಲೇಶ ಜಾಧವ, ಸಹ ಸಂಸ್ಥಾಪಕ ಭರತ ಶಿಂಧೆ, ಅಧ್ಯಕ್ಷ ಶಿವಾಜಿ ಪಾಟೀಲ, ಉಪಾಧ್ಯಕ್ಷ ಗಜಾನನ ಸಾವಂತ, ಕುಮಾರ ಕುಂಬಾರ, ಭರತ ವರೂಟೆ, ಉತ್ತಮ ಕಾಟಕರ ಇತರರಿದ್ದರು.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net