ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು

3
ಸೌಂದತ್ತಿ ಗ್ರಾಮದ ಬಾಜಿರಾವ್ ಮಗದುಮ್ಮ ಪ್ರೌಢಶಾಲೆಯಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಗಣ್ಯರು ಚಾಲನೆ ನೀಡಿದರು. ವಿ.ಬಿ. ಚೌಗಲಾ, ಕುಮಾರ ಕಾಮಗೌಡ, ರಮೇಶ ಬೆಳಗಲೆ, ಅರುಣ ಸಲಗರೆ ಇತರರಿದ್ದರು.
Published on

ರಾಯಬಾಗ: ಉತ್ತಮ ಹವ್ಯಾಸ ಮೈಗೂಡಿಸಿಕೊಂಡು ಆದರ್ಶ ವಿದ್ಯಾರ್ಥಿಯಾಗಿ ರೂಪುಗೊಳ್ಳಬೇಕು ಎಂದು ದಿಗ್ಗೇವಾಡಿ ಪ್ರೌಢಶಾಲೆಯ ಮುಖ್ಯಶಿಕ್ಷಕ ವಿ.ಬಿ.ಚೌಗಲಾ ಹೇಳಿದರು.

ತಾಲೂಕಿನ ಬಾವನ ಸೌಂದತ್ತಿಯ ಆದರ್ಶ ಶಿಕ್ಷಣ ಸಂಸ್ಥೆಯ ಬಾಜಿರಾವ್ ಮಗದುಮ್ಮ ಅನುದಾನಿತ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ತಂದೆ-ತಾಯಿಯನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದರು.

ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಕುಮಾರ ಕಾಮಗೌಡ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ ಬೆಳಗಲೆ, ಉತ್ತಮ ಕಾಮಗೌಡ, ಸಿಆರ್‌ಪಿ ಎಂ.ಎನ್. ತಾಸೆವಾಲೆ, ಮುಖ್ಯೋಪಾಧ್ಯಾಯ ಅರುಣ ಸಲಗರೆ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ರೋಷನಿ ಜಮಾದಾರ ಸ್ವಾಗತಿಸಿದರು. ವೈಭವಿ ಹಿರೇಮಠ ನಿರೂಪಿಸಿದರು. ಸ್ನೇಹಾ ಶಿಂಗಾಡೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net