

ಕಲಬುರಗಿ : ಬೀದರ್-ಬೆಂಗಳೂರು ಹೆದ್ದಾರಿಯಲ್ಲಿರುವ ಇಲ್ಲಿಗೆ ಸಮೀಪದ ನದಿ ಸಿನ್ನೂರ ಹತ್ತಿರದಲ್ಲಿ ಬುಧವಾರ ರಾತ್ರಿ ಬೈಕ್‌ಗೆ ಟಾಟಾ ಎಸಿ ಗೂಡ್ಸ್ ವಾಹನ ಡಿಕ್ಕಿ ಹೊಡೆದು ತಂದೆ-ಮಗಳು ಮೃತಪಟ್ಟಿದ್ದಾರೆ. ತಾಯಿ ಮತ್ತು ಮಗ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪ್ರಕಾಶ ಅಮೃತ ಹರಳಯ್ಯ (೩೧) ಮತ್ತು ಪುತ್ರಿ ಅಪೇಕ್ಷಾ (೪) ಮೃತಪಟ್ಟವರು. ಗಾಯಗೊಂಡಿರುವ ಪತ್ನಿ ಗಾಯತ್ರಿ ಮಗ ಪ್ರದೀಪ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೇವರ್ಗಿ ತಾಲೂಕಿನವರಾದ ಪ್ರಕಾಶ, ಕಲಬುರಗಿಯಲ್ಲಿ ಗೌಂಡಿ ಕೆಲಸ ಮಾಡಿಕೊಂಡಿದ್ದ. ಆರ್‌ಜಿ ನಗರದಲ್ಲಿ ಮನೆ ಮಾಡಿಕೊಂಡು ಕುಟುಂಬದವರೊAದಿಗೆ ವಾಸಿಸುತ್ತಿದ್ದರು. ಕೆಲಸ ನಿಮಿತ್ತವಾಗಿ ಜೇವರ್ಗಿ ಕಡೆಗೆ ಬೈಕ್ ಮೇಲೆ ಹೋಗುತ್ತಿರುವಾಗ ಅವಘಡ ಸಂಭವಿಸಿದೆ.
ಅಪಘಾತ ಸಂಭವಿಸಿದ್ದರಿAದ ಹೆದ್ದಾರಿಯಲ್ಲಿ ಕೆಲಹೊತ್ತು ಸಂಚಾರ ಸ್ಥಗಿತಗೊಂಡಿತ್ತು. ಗಾಯಗೊಂಡವರನ್ನು ಕೂಡಲೇ ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಅಷ್ಟರಲ್ಲಿ ತಂದೆ-ಮಗಳು ಕೊನೆಯುಸಿರಳೆದಿದ್ದರು. ಸ್ಥಳಕ್ಕೆ ಸಂಚಾರ ಉಪ ವಿಭಾಗದ ಸಹಾಯಕ ಆಯುಕ್ತ ಇಸ್ಮಾಯಿಲ್‌ಸಾಬ, ಇನ್‌ಸ್ಪೆಕ್ಟರ್ ಶಾಂತಿನಾಥ ಮತ್ತು ಸಿಬ್ಭಂದಿ ಭೇಟಿ ನೀಡಿದರು. ಸಂಚಾರ ಠಾಣೆ-೧ ರಲ್ಲಿ ಪ್ರಕರಣ ದಾಖಲಾಗಿದೆ.