ಉತ್ತಮ ಆರೋಗ್ಯದಿಂದ ಸಫಲ ಜೀವನ: ಇಡಾ ಮಾರ್ಟಿನ ಮಾರ್ಬನ್ಯಾಂಗ್

23 Jaggu 4
ಕೆಎಲ್​ಇ ಸಂಸ್ಥೆಯ ಲಿಂಗರಾಜ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ "ಸಂಡೇ ಆನ್​ ಸೈಕಲೋಥಾನ್​' ಅನ್ನು ಬೆಳಗಾವಿ ನಗರ ಪೊಲೀಸ್​ ಆಯುಕ್ತ ಇಡಾ ಮಾರ್ಟಿನ್​ ಮಾರ್ಬನ್ಯಾಂಗ್​ ಉದ್ಘಾಟಿಸಿದರು. ಡಾ.ಎಚ್​.ಎಸ್​.ಮೇಲಿನಮನಿ, ಡಾ. ಸಿ.ರಾಮರಾವ್​, ಡಾ.ರೀಚಾ ರಾವ್​, ಡಾ.ಶಿವಾನಂದ ಬುಲಬುಲೆ ಇದ್ದರು.
Published on

ಬೆಳಗಾವಿ: ಸದೃಢ ಆರೋಗ್ಯಕ್ಕೆ ಶಾರೀರಕ ವ್ಯಾಯಾಮ ಅಗತ್ಯ. ಉತ್ತಮ ಆರೋಗ್ಯದಿಂದ ಜೀವನ ಸಫಲಗೊಳಿಸಲು ಸಾಧ್ಯ ಎಂದು ಬೆಳಗಾವಿ ನಗರ ಪೊಲೀಸ್​ ಆಯುಕ್ತ ಇಡಾ ಮಾರ್ಟಿನ ಮಾರ್ಬನ್ಯಾಂಗ್​ ಹೇಳಿದರು.

ಕೆಎಲ್​ಇ ಸಂಸ್ಥೆಯ ಲಿಂಗರಾಜ ಕಾಲೇಜು, ಸಾಯಿ ಫೌಂಡೇಶನ್​, ಸ್ಫೋರ್ಟ್​ ಅಥೋರ್ರಿಟಿ ಆಫ್​ ಇಂಡಿಯಾ, ಫಿಟ್​ ಇಂಡಿಯಾ ಸಹಯೋಗದಲ್ಲಿ ಸಂಡೇ ಆನ್​ ಸೈಕಲೋಥಾನ್​ ಉದ್ಘಾಟಿಸಿ ಮಾತನಾಡಿ, ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿಟ್ಟಕೊಳ್ಳುವುದು ಇಂದಿನ ಅಗತ್ಯವಾಗಿದೆ. ನಿತ್ಯ ಅಸಂಖ್ಯ ರೋಗಗಳು ಮನುಷ್ಯನನ್ನು ಆವರಿಸಿಕೊಳ್ಳುತ್ತಿವೆ. ನಮ್ಮ ಬದಲಾದ ಜೀವನ ಪದ್ಧತಿಯಿಂದ ಜೀವನ ಔಷಧೋಪಚಾರದಲ್ಲಿ ಮುನ್ನಡೆಸುವಂತಾಗುತ್ತಿದೆ. ಯುವಜನಾಂಗವು ಶಾರೀರಕವಾಗಿ ಸದೃಢವಾಗಿ ದೇಶದ ಬೆಳವಣಿಗೆಯಲ್ಲಿ ಕೈಜೋಡಿಸಬೇಕು. ಈ ಪರಿಸರವನ್ನು ಸ್ನೇಹಿಮಯವನ್ನಾಗಿ ರೂಪಿಸಬೇಕು ಎಂದು ಹೇಳಿದರು.

ಪ್ರಾಚಾರ್ಯ ಡಾ.ಎಚ್​.ಎಸ್​.ಮೇಲಿನಮನಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ರಚನಾತ್ಮಕ ಹಾಗೂ ಕ್ರಿಯಾಶೀಲ ಮನಸ್ಸನ್ನು ರೂಪಿಸುವಲ್ಲಿ ಸೈಕಲೋಥಾನ್​ ನಂತಹ ಚಟುವಟಿಕೆಗಳು ಮಹತ್ವವಾಗಿವೆ. ಪರಿಸರಸ್ನೇಹಿ ಜೀವನ ರೂಪಿಸಿಕೊಂಡರೆ ಜಾಗತಿಕ ತಾಪಮಾನ ತೊಡೆದುಹಾಕಲು ಸಾಧ್ಯ. ಜನರಲ್ಲಿ ಪ್ರೆ ಮೂಡಿಸುವುದಕ್ಕಾಗಿ ಇಂದು ನಾವು ಸೈಕಲ್​ ಜಾಥಾ ಆಯೋಜಿಸಿದ್ದೇವೆ ಎಂದರು.

ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ರಾಮರಾವ್​ ಪ್ರಾಸ್ತಾವಿಕ ಮಾತನಾಡಿದರು. ಅಂತಾರಾಷ್ಟ್ರೀಯ ಅಥ್ಲೇಟಿಕ್​ ತರಬೇತುದಾರ ರಾಮ ಬುಡಕೆ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ರೀಚಾ ರಾವ್​, ಡಾ.ಶಿವಾನಂದ ಬುಲಬುಲೆ, ಡಾ.ಎಚ್​.ಎಂ.ಚನ್ನಪ್ಪಗೋಳ, ವಿಶ್ವನಾಥ ಖೋತ, ವಿನಾಯಕ ವರೂಟೆ, ಸುನೀತ ಮೂಡಲಗಿ, ವಿ.ಪಿ.ಹಿರೇಮಠ, ಪೊ.ಪಂಕಜ ದೇಸಾಯಿ ಉಪಸ್ಥಿತರಿದ್ದರು. ಡಾ.ಮಹೇಶ ಗುರನಗೌಡರ ನಿರೂಪಿಸಿ, ವಂದಿಸಿದರು. ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೈಕಲೋಥಾನ್​ದಲ್ಲಿ ಪಾಲ್ಗೊಂಡಿದ್ದರು. ಬೆಳಗಾವಿ ಸ್ಮಾರ್ಟಸಿಟಿ ಪರಿಸರ ಸ್ನೇಹಿ ಬೈಸಿಕಲ್​ ನೂರಕ್ಕೂ ಹೆಚ್ಚು ಸೈಕಲ್​ಗಳನ್ನು ನೀಡಿ ಸಹಕಾರ ನೀಡಿ ಪ್ರೋತ್ಸಾಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net