ಪೌಷ್ಟಿಕ ಆಹಾರದಿಂದ ಉತ್ತಮ ಆರೋಗ್ಯ

halyal gp
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಪೌಷ್ಟಿಕ ಆಹಾರ ಸೇವೆನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಂಡು ಒಳ್ಳೆಯ ಪ್ರಜೆಯಾಗಲು ಸಾಧ್ಯ ಎಂದು ಹಳ್ಯಾಳ ಗ್ರಾಮ ಪಂಚಾಯತಿ ಅಧ್ಯಕ್ಷ ಬಸವರಾಜ ಹಸರೆಡ್ಡಿ ಹೇಳಿದರು.

ತಾಲೂಕಿನ ಹಳ್ಳಾಳ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಆಯೋಜಿಸಿದ್ದ ಪೌಷ್ಟಿಕ ಆಹಾರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ವಿಷಮುಕ್ತ ಆಹಾರ ಸಿಗುವುದು ಬಹಳ ದುಸ್ತರ ಆಗಿದ್ದು ದೊಡ್ಡ ಸವಾಲುಗಳನ್ನು ತಾಯಂದಿರು ಎದುಸಬೇಕಾಗಿದೆ. ಪೌಷ್ಟಿಕ ಆಹಾರ ಸೇವನೆಯು ಬಲಾಢ್ಯ ರಾಷ್ಟ್ರ ನಿರ್ವಣದಲ್ಲಿ ಪ್ರಮುಖ ಪಾತ್ರ ವಹಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ ನಾಗನಗೌಡ ಮಾತನಾಡಿದರು. ಇದೇ ವೇಳೆ ಗರ್ಭಿಣಿಯರಿಗೆ ಸೀಮಂತ ಕಾರ್ಯ ಸಹ ಮಾಡಲಾಯಿತು.

ಗ್ರಾಪಂ ಉಪಾಧ್ಯಕ್ಷೆ ಕಮಲವ್ವ ಜವಳೀಗೇರಿ, ಕೆಂಚಪ್ಪ ಮಲ್ಲಮ್ಮನವರ, ಫಕೀರವ್ಚ ಮಲ್ಲಮ್ಮನವರ, ಗುರುಪಾದಗೌಡ ಹಣಮಂತಗೌಡರ, ಮಹಾದೇವಿ ಹಳ್ಳಾಳ, ಲಕ್ಷ್ಮೀ ಕನಕಾಜನವರ, ಸಿಡಿಪಿಒ ಅತೀಕಾ ಸಿದ್ದಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ.ಆರ್ ವಾಲೀಕಾರ, ಶಿವಗಂಗಾ ಹೆಬ್ಬಳ್ಳಿ, ಶೈಲಜಾ ಅರಕೇರಿ, ಶೋಭಾ ಹಿರೇಮಠ, ಮಹಾದೇವಿ ಹಸರೆಡ್ಡಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net