ಪ್ರಕೃತಿದತ್ತ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ

sid
Published on

ವಿಜಯವಾಣಿ ಸುದ್ದಿಜಾಲ ಬೆಳ್ವೆ

ಮಕ್ಕಳ ಹಾಗೂ ತಾಯಂದಿರ ಆರೋಗ್ಯ ಸುರಕ್ಷತೆ, ಪಾಲನೆ, ಕಾಳಜಿ, ವಿವಿಧ ಸೌಲಭ್ಯಗಳನ್ನು ನೀಡುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸೇವೆ ಅಮೂಲ್ಯವಾದದು. ಪ್ರಕೃತಿದತ್ತವಾಗಿ ದೊರೆಯುವ ಆಹಾರ ಪದಾರ್ಥಗಳ ಬಳಕೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಬೆಳ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ಹೇಳಿದರು.

ಬೆಳ್ವೆ ಗ್ರಾಪಂ ಸಭಾಂಗಣದಲ್ಲಿ ಬೆಳ್ವೆ ವಲಯ ಅಂಗನವಾಡಿ ಕೇಂದ್ರಗಳ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾದ ಪೋಷಣಾ ವಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.

ಕುಂದಾಪುರ ತಾಲೂಕು ಶಿಶು ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ಉಮೇಶ ಕೋಟ್ಯಾನ್, ಕುಂದಾಪುರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಭಾಗ್ಯಲಕ್ಷ್ಮೀ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಿಷನ್ ಶಕ್ತಿ ಯೋಜನೆ ಜಿಲ್ಲಾ ಸಂಯೋಜಕಿ ಶಾರದಾ, ಬೆಳ್ವೆ ಗ್ರಾಪಂ ಪಿಡಿಓ ಸತೀಶ್ ನಾಯ್ಕ, ಪಂಚಾಯಿತಿ ಸದಸ್ಯರಾದ ನಾರಾಯಣ ನಾಯ್ಕ ಕಲ್ಮರ್ಗಿ, ಅಮೃತಾ, ಅಕ್ಷತಾ, ಸುಮಲತಾ, ರವ್ಯಾ, ದಯಾನಂದ ಪೂಜಾರಿ, ಉದಯಕುವಾರ್ ಶೆಟ್ಟಿ, ಸುಶೀಲಾ, ಚಂದ್ರಿಕಾ ಬೆಳ್ವೆ, ರೇವತಿ, ಎಸ್.ಚಂದ್ರಶೇಖರ್ ಶೆಟ್ಟಿ, ಸತೀಶ್ ಕುವಾರ್ ಶೆಟ್ಟಿ, ಪೃಥ್ವೀಜ್ ಶೆಟ್ಟಿ, ವಿಶಾಲಾಕ್ಷಿ, ಸ್ತ್ರೀಶಕ್ತಿ ಸಂ, ಸಂಜೀವಿನಿ ಸಂ, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಪಾಲಕರು ಉಪಸ್ಥಿತರಿದ್ದರು.

ರೇವತಿ ಸ್ವಾಗತಿಸಿದರು. ಶಶಿಕಲಾ ಅಲ್ಸೆ ಸೆಟ್ಟೋಳಿ ಪ್ರಾರ್ಥಿಸಿದರು. ಉಮೇಶ ಕೋಟ್ಯಾನ್ ಪ್ರಾಸ್ತಾವಿಸಿದರು. ಗಣೇಶ್ ಅರಸಮ್ಮಕಾನು ನಿರೂಪಿಸಿದರು. ಪವಿತ್ರಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net