ಮಿತ ಆಹಾರದಿಂದ ಉತ್ತಮ ಆರೋಗ್ಯ

CHACHADI
Published on

ಮುಳಗುಂದ: ಗ್ರಾಮೀಣ ಭಾಗದ ಜನರಿಗೆ ಮನೆ ಬಾಗಿಲಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು ಶ್ಲಾಘನೀಯ ಎಂದು ಡಾ. ಎಸ್.ಸಿ.ಚವಡಿ ಹೇಳಿದರು.

ಇಲ್ಲಿನ ಬಾಲಲೀಲಾ ಮಹಾಂತ ಶಿವಯೋಗಿಗಳ ಕಲಾ ಭವನದಲ್ಲಿ ದಿ.ರೂರಲ್ ಮೆಡಿಕಲ್ ಸರ್ವಿಸ್ ಸೂಸೈಟಿ, ಕೆ.ಎಚ್.ಪಾಟೀಲ ಆಸ್ಪತ್ರೆ ಮತ್ತು ರಿಸರ್ಚ್ ಇನ್‌ಸ್ಟಿಟ್ಯೂಟ್ ಹಾಗೂ ಸೆರೆಂಟಿಕಾ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿತ್ಯ ವ್ಯಾಯಾಮ, ಮಿತ ಆಹಾರ ಬಳಕೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ರೂರಲ್ ಸೂಸೈಟಿ ಅಧ್ಯಕ್ಷ ಡಾ. ಎಸ್.ಆರ್.ನಾಗನೂರ ಮಾತನಾಡಿದರು. ಎಲುವು-ಕೀಲು, ಔಷಧ ಶಾಸ್ತ್ರ, ಪ್ರಸೂತಿ, ಚರ್ಮರೋಗ, ಕಿವಿ, ಮೂಗು, ಗಂಟಲು, ಮನೋರೋಗ, ದಂತ ವೈದ್ಯರು ಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಿದರು.

ಎಂ.ಡಿ. ಬಟ್ಟೂರ, ಶಿವಣ್ಣ ನೀಲಗುಂದ, ಪಪಂ ಅಧ್ಯಕ್ಷೆ ಯಲ್ಲವ್ವ ಕಲ್ಲೂರ, ಐ.ಎಂ. ಶೇಖ, ಕೆ.ಎಲ್. ಕರಿಗೌಡರ, ಎಸ್.ಸಿ.ಬಡ್ನಿ, ನಾಗರಾಜ ದೇಶಪಾಂಡೆ, ಬಾಲಕೃಷ್ಣ ಜೆ, ಡಾ.ವೇಮನ ಸಾಹುಕಾರ, ವಿಜೇಶ ಮಾನಕರ, ಡಾ. ಜಗದೀಶ ಗಡ್ಡೆಪ್ಪನವರ, ಡಾ.ಸವಿತಾ ಕುಲಕರ್ಣಿ, ಡಾ. ಕೃಷ್ಣರಡ್ಡಿ ನಾವಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net