ಸಮತೋಲಿತ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ

MDG1 (3)
Published on

ಮೂಡಿಗೆರೆ: ಉತ್ತಮ ಆರೋಗ್ಯಕ್ಕೆ ಸಮರ್ಪಕವಾದ ಸಮತೋಲಿತ ಆಹಾರ ಸೇವಿಸುವ ಅಗತ್ಯ. ಇಂದಿನ ಆಹಾರ ಪದ್ಧತಿಯಿಂದ ಮಾರಕ ಕಾಯಿಲೆ ಆವರಿಸುತ್ತಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಕಾಯಿಲೆಯನ್ನು ತಡೆಗಟ್ಟಬೇಕು ಎಂದು ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಫಾ.ಅರುಣ್ ತಿಳಿಸಿದರು.

ವಿಮುಕ್ತಿ ಚಾರಿಟೇಬಲ್ ಟ್ರಸ್ಟ್, ಕಪುಚಿನ್ ಕೃಷಿಕ ಸೇವಾ ಕೇಂದ್ರದಿಂದ ಕಿರುಗುಂದ ಗ್ರಾಪಂ ಸಭಾಂಗಣದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಮತ್ತು ಕಣ್ಣು ಪರೀಕ್ಷೆ ಶಿಬಿರದಲ್ಲಿ ಮಾತನಾಡಿ, ಹಿಂದಿನ ಕಾಲದಲ್ಲಿ ಆಹಾರದ ಕೊರತೆಯಿತ್ತು. ಜನ ಹಸಿವಿನಿಂದ ಬಳಲುತ್ತಿದ್ದರು. ಈಗ ಆಹಾರದ ಕೊರತೆಯಿಲ್ಲ. ಆದರೆ ಆರೋಗ್ಯ ಕಾಪಾಡಿಕೊಳ್ಳಬಲ್ಲ ಆಹಾರ ದೊರೆಯುತ್ತಿಲ್ಲ. ಕಲ್ಮಶದಿಂದ ಕೂಡಿದ ಆಹಾರ ಸೇವನೆಯಿಂದ ಕಾಯಿಲೆ ಆವರಿಸಿಕೊಳ್ಳುತ್ತಿದೆ. ಈಗ ಪ್ರತಿ ಮನೆಯಲ್ಲೂ ಮಾತ್ರೆ, ಔಷಧಿ ತುಂಬಿರುತ್ತದೆ. ಊಟಕ್ಕಿಂತ ಮೊದಲು ಮತ್ತು ನಂತರ ಮಾತ್ರೆ ಸೇವನೆಯಾಗಲೇ ಬೇಕು. ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ನೆಮ್ಮದಿ ಜೀವನ ಕಂಡುಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.

ಕಿರುಗುಂದ ಗ್ರಾಪಂ ಅಧ್ಯಕ್ಷೆ ಸ್ವಾತಿ ಶ್ರೀ, ಪಿಡಿಒ ಸಾಹಿತ್ಯ, ಕಾರ್ಯದರ್ಶಿ ನಂಜಯ್ಯ, ಸಿಬ್ಬಂದಿ ಮಂಜುನಾಥ್, ಸುದೇಶ್, ರಾಮಯ್ಯ, ಗ್ರಾಪಂ ಮಾಜಿ ಸದಸ್ಯರಾದ ಗೋಪಮ್ಮ, ಪ್ರೇಮಾ, ಸುಜಾತ, ಶಾರದ ಜೈಪಾಲ್, ಕುಮಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net