ಉತ್ತಮ ಆರೋಗ್ಯಕ್ಕೆ ಕ್ರೀಡೆಗಳು ಪೂರಕ

2 MNL 1-Web
ಶಿಂದೋಗಿ ಗ್ರಾಮದಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯನ್ನು ರಾಹುಲ ಜಾರಕಿಹೊಳಿ ಉದ್ಘಾಟಿಸಿದರು. ಪಂಚನಗೌಡ ದ್ಯಾಮನಗೌಡರ, ವಿಶ್ವಾಸ ವೈದ್ಯ, ಡಿ.ಡಿ.ಟೋಪೋಜಿ, ರಾಜು ತೋರಗಲ್ಲ ಇತರರು ಇದ್ದರು.
Published on

ಮುನವಳ್ಳಿ: ಸಮೀಪದ ಶಿಂದೋಗಿ ಗ್ರಾಮದಲ್ಲಿ ಪ್ರವೀಣ ಶಿಂಧೆ ಸ್ಮರಣಾರ್ಥ ಜೈ ಮಲ್ಲಿಕಾರ್ಜುನ ಕಬಡ್ಡಿ ತಂಡದಿಂದ ಆಯೋಜಿಸಿದ್ದ ರಾಜ್ಯಮಟ್ಟದ ಮುಕ್ತ ಪ್ರೊ.ಕಬಡ್ಡಿ ಪಂದ್ಯಾವಳಿಯನ್ನು ರಾಹುಲ ಸತೀಶ ಜಾರಕಿಹೊಳಿ ಉದ್ಘಾಟಿಸಿದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಕಾಂಗ್ರೆಸ್ ಮುಖಂಡ ಪಂಚನಗೌಡ ದ್ಯಾಮನಗೌಡರ ಮಾತನಾಡಿ, ಕಬಡ್ಡಿ ನಮ್ಮ ದೇಶದ ಜನಪ್ರಿಯ ಕ್ರೀಡೆಯಾಗಿದೆ. ಉತ್ತಮ ಆರೋಗ್ಯಕ್ಕೆ ಕಬಡ್ಡಿ ಪೂರಕ ಕ್ರೀಡೆಯಾಗಿದೆ ಎಂದರು.

ಕಾಂಗ್ರೆಸ್ ಮುಖಂಡ ವಿಶ್ವಾಸ ವೈದ್ಯ ಹಾಗೂ ಯರಗಟ್ಟಿ-ಮುನವಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ.ಟೋಪೋಜಿ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಕೊಡುವ ಮಹತ್ವವನ್ನು ಕ್ರೀಡೆಗಳಿಗೂ ಕೊಟ್ಟರೆ ಮಾತ್ರ ಸಮಗ್ರ ಬೆಳವಣಿಗೆ ಸಾಧ್ಯ ಎಂದರು.

ವೇ.ಮೂ.ಮಡಿವಾಳಸ್ವಾಮಿ ಹಿರೇಮಠ, ಡಾ.ರವಿ ಹನಸಿ, ಮಲ್ಲಿಕಾರ್ಜುನ ದಸ್ತಿ, ಪರಶುರಾಮ ಗಂಟಿ, ಎ.ವಿ.ನರಗುಂದ, ಸುರೇಶ ಶಿಂಧೆ, ಹನುಮಂತ ಸಿಂಗಣ್ಣವರ, ಮಲ್ಲಪ್ಪ ವಗ್ಗರ, ರಾಜು ತೋರಗಲ್ಲ, ಭೀಮಶಿ ಉಳ್ಳಾಗಡ್ಡಿ, ಪರಶುರಾಮ ಕದಂ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net