ಉತ್ತಮ ಆರೋಗ್ಯ ಕಾಪಾಡಲು ಸಹಕರಿಸಿ

24-DVD-3
ದೇವದುರ್ಗ ತಿಲಕ್ ಓಣಿಯಲ್ಲಿ ಡೆಂಘೆ ಜಾಗೃತಿ ಹಾಗೂ ಡ್ರೈ ಡೇ ಕಾರ್ಯಕ್ರಮ ಜರುಗಿತು. ತಾಲೂಕು ಮಲೇರಿಯಾ ಮೇಲ್ವಿಚಾರಕ ಓಂಕಾರ ಜಂತೇಕಾರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ, ಆರೋಗ್ಯ ಅಧಿಕಾರಿ ಫ್ರಕೃದ್ಧಿನ್, ಈಶಮ್ಮ, ಪಾರ್ವತಿ, ಆಶಾ ಕಾರ್ಯಕರ್ತೆ ರಹಿಮ್ಯುನಿಸಾ ಇದ್ದರು.
Published on

ದೇವದುರ್ಗ: ಸೊಳ್ಳೆಗಳ ಕಡಿತದಿಂದ ಸಾಂಕ್ರಮಿಕ ರೋಗಗಳು ಬರುತ್ತವೆ. ಹೀಗಾಗಿ ಪರಿಸರ ಸ್ವಚ್ಛಗೊಳಿಸಿ ಲಾರ್ವಾ ಉತ್ಪತ್ತಿ ನಾಶ ಮಾಡಬೇಕು ಎಂದು ತಾಲೂಕು ಮಲೇರಿಯಾ ಮೇಲ್ವಿಚಾರಕ ಓಂಕಾರ ಜಂತೇಕಾರ್ ಹೇಳಿದರು.

ಪಟ್ಟಣದ ತಿಲಕ್ ನಗರದಲ್ಲಿ ಜಿಲ್ಲಾಡಳಿ, ಜಿಪಂ, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಡೆಂಘೆ ಜಾಗೃತಿ ಹಾಗೂ ಡ್ರೈ ಡೇ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ನಿಂತ ಸ್ವಚ್ಛ ನೀರಿನಲ್ಲಿ ಈಡಿಸ್ ಸೊಳ್ಳೆಗಳು ಬೆಳೆಯುತ್ತವೆ. ಹೂವಿನ ಕುಂಡಗಳು, ಮನೆ ಸುತ್ತಮುತ್ತ ಎಸೆದಿರುವ ಹಳೆಯ ಪಾತ್ರೆ, ಮಡಿಕೆ, ಟೈರು, ಬಕೇಟು, ಪ್ಲಾಸ್ಟಿಕ್ ಕಪ್, ಎಳೆನೀರಿನ ಚಿಪ್ಪುನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ.

ಸೊಳ್ಳೆ ಉತ್ಪತ್ತಿ ತಾಣ ನಾಶ ಮಾಡುವ ದೃಷ್ಟಿಯಿಂದ ಪ್ರತಿ ಶುಕ್ರವಾರ ಡ್ರೈ ಡೇ ಆಚರಿಸಲಾಗುತ್ತಿದೆ. ಈ ಮೂಲಕ ಸ್ವಚ್ಛತೆಗೆ ಆಧ್ಯತೆ ನೀಡುವ ಜತೆಗೆ ಪ್ರತಿ ವಾರ್ಡ್‌ಗೆ ತೆರಳಿ ಜಾಗೃತಿ ಮೂಡಿಸಲಾಗುತ್ತಿದೆ. ಉತ್ತಮ ಆರೋಗ್ಯ ಹಾಗೂ ಪರಿಸರ ಕಾಪಾಡಲು ಸಾರ್ವಜನಿಕರು ಆರೋಗ್ಯ ಇಲಾಖೆ ಜತೆ ಕೈಜೋಡಿಸಬೇಕು ಎಂದರು.

ಕ್ಷೇತ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ, ಆರೋಗ್ಯ ಅಧಿಕಾರಿ ಫ್ರಕೃದ್ಧಿನ್, ಈಶಮ್ಮ, ಪಾರ್ವತಿ, ಆಶಾ ಕಾರ್ಯಕರ್ತೆ ರಹಿಮ್ಯುನಿಸಾ, ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net