ಉತ್ತಮ ಆರೋಗ್ಯಕ್ಕೆ ಒಳ್ಳೆಯ ಆಹಾರ ಸೇವಿಸಲಿ

5
Published on

ಚಿಕ್ಕೋಡಿ: ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಿ, ಒಳ್ಳೆಯ ಆಹಾರ ಸೇವನೆ ಮಾಡಿ ಆರೋಗ್ಯವಂತರಾಗಬೇಕು ಎಂದು ಸದಲಗಾ ಗೀತಾಶ್ರಮದ ಡಾ.ಶ್ರದ್ಧಾನಂದ ಸ್ವಾಮೀಜಿ ಹೇಳಿದರು.

ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಜೊಲ್ಲೆ ಗ್ರೂಪ್ ಸಹಯೋಗದಲ್ಲಿ ಯಕ್ಸಂಬಾ-ಚಿಕ್ಕೋಡಿ ಮಾರ್ಗದಲ್ಲಿರುವ ಬೀರೇಶ್ವರ ಮುಖ್ಯ ಕಚೇರಿ ಪ್ರಾರಂಗಣದಲ್ಲಿ ಪ್ರಾರಂಭಿಸಿದ ನಾದಬ್ರಹ್ಮಇಡ್ಲಿ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ನಾದಬ್ರಹ್ಮ ಸೆಂಟರ್‌ನ ವ್ಯವಸ್ಥಾಕ ನಿರ್ದೇಶಕ ವೃಷಭ ಪಾಟೀಲ ಮಾತನಾಡಿ, ಮಹಾರಾಷ್ಟ್ರದ ಪುಣೆಯಲ್ಲಿ ಪ್ರಾರಂಭಿಸಿ ಇಂದು ಮಹಾರಾಷ್ಟ್ರದಲ್ಲಿ 300 ಕೇಂದ್ರಗಳಿಂದ ಉತ್ತಮ ಸೇವೆ ನೀಡುತ್ತಿದ್ದೇವೆ.

ಕರ್ನಾಟಕದ ಹುಬ್ಬಳ್ಳಿ, ರಾಯಬಾಗ ಮತ್ತು ಚಿಕ್ಕೋಡಿಯಲ್ಲೂ ಕೇಂದ್ರ ಆರಂಭಿಸಲಾಗಿದ್ದು, ಯಕ್ಸಂಬಾದಲ್ಲಿ 4 ನೇ ಸೆಂಟರ್ ತೆರೆಯಲಾಗಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಸುಮಾರು 100ಕ್ಕೂ ಹೆಚ್ಚಿನ ಸೆಂಟರ್ ತೆರೆಯಲಾಗುವುದು ಎಂದರು.

ಸಾನ್ನಿಧ್ಯ ವಹಿಸಿದ್ದ ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ ಮಾತನಾಡಿ, ಕಡಿಮೆ ಬೆಲೆಯಲ್ಲಿ ಸ್ವಚ್ಛ ಹಾಗೂ ಶಿಸ್ತು ಅಳವಡಿಸಿಕೊಂಡು ಇಡ್ಲಿ ತಯಾರಿಸುತ್ತಿರುವುದು ಶ್ಲಾಘನೀಯ ಎಂದರು.

ಜೋತಿಪ್ರಸಾದ ಜೊಲ್ಲೆ, ಜಯಾನಂದ ಜಾಧವ, ಅಪ್ಪಾಸಾಹೇಬ ಜೊಲ್ಲೆ, ಪವನ ಪಾಟೀಲ, ಲಕ್ಷ್ಮಣ ಕಬಾಡೆ, ನೇಮನ್ನಾ ಪಟ್ಟಣಕುಡೆ, ಮಂಗಲ ಜೊಲ್ಲೆ, ವಿಜಯ ರಾವುತ ಉಪಸ್ಥಿತರಿದ್ದರು. ಪ್ರಧಾನ ವ್ಯವಸ್ಥಾಪಕ ಬಿ.ಎ.ಗುರವ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net