

ಸವಣೂರ: ಕ್ರೀಡೆ ಮತ್ತು ಪಠ್ಯ ಎರಡರಲ್ಲೂ ಸಾಧನೆ ಮಾಡಬೇಕು. ಆರೋಗ್ಯವಂತ ಮನಸ್ಸಿದ್ದರೆ ದೈಹಿಕ ಆರೋಗ್ಯ ಚೆನ್ನಾಗಿರಲಿದೆ. ಕ್ರೀಡೆಗಳಿಂದ ಶಾರೀರಿಕ ಚೈತನ್ಯ, ಮಾನಸಿಕ ಉಲ್ಲಾಸ ಸಾಧ್ಯ ಎಂದು ಬಿಇಒ ಎಂ.ಎಫ್. ಬಾರ್ಕಿ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾವೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ ಸವಣೂರ ಇವರ ಆಶ್ರಯದಲ್ಲಿ ಗುರುಕುಲ ಇಂಟರ್ನ್ಯಾಷನಲ್ ಸ್ಕೂಲ್ ಇತ್ತೀಚೆಗೆ ಆಯೋಜಿಸಿದ್ದ 2023-24ನೇ ಸಾಲಿನ ಸವಣೂರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡಾಕೂಟದಲ್ಲಿ ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆಯೇ ಮುಖ್ಯ ಎಂದರು.
ಗುರುಕುಲ ಇಂಟರ್ನ್ಯಾಷನಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪುಟ್ಟಪ್ಪ ಸಿಂಧೂರ, ಕಾರ್ಯದರ್ಶಿ ದೀಪಾಂಜಲಿ ಸಿಂಧೂರ, ಮುಖ್ಯ ಗುರುಮಾತೆ ಸರಳಾ ಮಠಪತಿ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಕೆ. ಪಾಟೀಲ, ಪ್ರಮುಖರಾದ ಪ್ರಭು ಅರಗೋಳ, ಶಿವಯೋಗಿ ಆಲದಕಟ್ಟಿ, ಎನ್.ವಿ.ಕಲಕೋಟಿ, ಬಿಆರ್ಪಿ ಡಿ.ಆರ್. ತೋಟಗೇರ, ಸಿಆರ್ಪಿ ನಾಗರಾಜ ಬಂಡಿವಡ್ಡರ, ಪ್ರಕಾಶ ಕೆಂಚಣ್ಣನವರ, ಕ್ರೀಡಾಕೂಟದಲ್ಲಿ ಸವಣೂರ ಕ್ಲಸ್ಟರ್ ಮಟ್ಟದ 28 ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.