ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಅಗತ್ಯ

19KUDLIGI3
ಕೂಡ್ಲಿಗಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನ ಕಾರ್ಯಕ್ರಮಕ್ಕೆ ತಹಸೀಲ್ದಾರ್ ವಿ. ಕೆ.ನೇತ್ರಾವತಿ ಚಾಲನೆ ನೀಡಿದರು. ಆಡಳಿತ ವೈದ್ಯಾಧಿಕಾರಿ ಸಿ.ಮಧು, ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಸುನೀತಾ, ಐಸಿಟಿಸಿ ಆಪ್ತ ಸಮಾಲೋಚಕ ಕೆ.ಪ್ರಶಾಂತ ಕುಮಾರ್, ಆರ್‌ಕೆಎಸ್‌ಕೆ ಆಪ್ತ ಸಮಾಲೋಚಕ ಓಬಣ್ಣ ಇದ್ದರು.
Published on

ಕೂಡ್ಲಿಗಿ: ಹದಿಹರೆಯದವರು ಹಾಗೂ ಮಕ್ಕಳು ಪೌಷ್ಟಿಕ ಆಹಾರ ಸೇವಿಸುವ ಮೂಲಕ ಆರೋಗ್ಯವಂತ ಸಮಾಜಕ್ಕೆ ಮುನ್ನುಡಿ ಬರೆಯಬೇಕಿದೆ ಎಂದು ತಹಸೀಲ್ದಾರ್ ವಿ.ಕೆ.ನೇತ್ರಾವತಿ ಹೇಳಿದರು.

ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜಾಗತಿಕ ಬದಲಾವಣೆಯಿಂದ ಯುವ ಪೀಳಿಗೆ ಜಂಕ್ ಫುಡ್ ಅನ್ನು ಯಥೇಚ್ಛವಾಗಿ ಸೇವನೆ ಮಾಡುತ್ತಿದೆ. ಇದರಿಂದ ಸಣ್ಣ ವಯಸ್ಸಿನಲ್ಲಿಯೇ ಹೃದಯ ರೋಗ, ಯಕೃತ್ತಿನ ಕಾಯಿಲೆ ಸೇರಿದಂತೆ ಅನೇಕ ರೋಗಗಳು ಬರುತ್ತಿವೆ. ಸೊಪ್ಪು, ತರಕಾರಿ ಸೇವನೆಯೊಂದಿಗೆ ನಿಯಮಿತ ವ್ಯಾಯಾಮ ಮಾಡಬೇಕು ಎಂದರು.

ಟಿಎಚ್‌ಒ ಡಾ.ಎಸ್.ಪಿ.ಪ್ರದೀಪ್ ಮಾತನಾಡಿ, ಯುವ ಪೀಳಿಗೆ ಆರೋಗ್ಯಕರವಾದ ಆಹಾರ ಸೇವಿಸದೆ ಅನಾರೋಗ್ಯದ ಹಾದಿ ಹಿಡಿದಿರುವುದು ದುರದೃಷ್ಟ್ಟಕರ. ನಿತ್ಯ ಬೆಳಗ್ಗೆ ಲಘು ವ್ಯಾಯಾಮ ಮಾಡಬೇಕು. ಅಧಿಕ ಕೊಬ್ಬುಗಳು ಇಲ್ಲದ, ಬೇಯಿಸಿದ ಸೊಪ್ಪುಗಳು, ಕಾಳು, ತರಕಾರಿ, ಮೊಟ್ಟೆ ಸೇವಿಸಬೇಕು. ಹದಿಹರೆಯದ ಯುವತಿಯರಲ್ಲಿ ಇತ್ತೀಚೆಗೆ ರಕ್ತಹೀನತೆ ಕಂಡು ಬರುತ್ತಿದ್ದು, ಸರಿಯಾದ ಆಹಾರ ಕ್ರಮಗಳ ಬಗ್ಗೆ ಗಮನಹರಿಸಿ ಎಂದರು.

ಆಡಳಿತ ವೈದ್ಯಾಧಿಕಾರಿ ಸಿ.ಮಧು, ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಸುನೀತಾ, ಐಸಿಟಿಸಿ ಆಪ್ತ ಸಮಾಲೋಚಕ ಕೆ.ಪ್ರಶಾಂತ ಕುಮಾರ್, ಆರ್‌ಕೆಎಸ್‌ಕೆ ಆಪ್ತ ಸಮಾಲೋಚಕ ಓಬಣ್ಣ, ಎನ್‌ಸಿಡಿ ಆಪ್ತ ಸಮಾಲೋಚಕಿ ನಾಗರತ್ನ, ಆಶಾ ಕಾರ್ಯಕರ್ತೆಯರಾದ ಎ.ಎಂ.ಸಾವಿತ್ರಿ, ಲತಾ, ನಾಗವೇಣಿ, ದೀಪಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net