ಉತ್ತಮ ಹವ್ಯಾಸದಿಂದ ರೋಗ ದೂರ

malaria
Published on

ಮುಂಡರಗಿ: ಯುವ ಜನತೆ ಫಾಸ್ಟ್ ಪುಡ್, ಜಂಕ್‌ಪುಡ್, ಶೇಖರಿಸಿದ ಪಾನೀಯಗಳನ್ನು ಕುಡಿದು ಅಪ್ರಾಪ್ತ ವಯಸ್ಸಿನಲ್ಲಿಯೇ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಶೋಚನೀಯ. ಆರೋಗ್ಯಯುತ ಸಮಾಜಕ್ಕೆ ಶುದ್ಧ ಗಾಳಿ, ನೀರು, ಪೌಷ್ಟಿಕ ಆಹಾರ ಒಳ್ಳೆಯ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮಣ ಪೂಜಾರ ಹೇಳಿದರು.

ಇಲ್ಲಿಯ ಜಗದ್ಗುರು ತೋಂಟದಾರ್ಯ ಸಿ.ಬಿ.ಎಸ್.ಇ ವಸತಿ ಶಾಲೆಯಲ್ಲಿ ತಾಲೂಕು ಆರೋಗ್ಯ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ.ನಿತಿನ್ ಸ್ವರೂಪ್ ಮಾತನಾಡಿ, ನಿಂತ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇದರಿಂದ ಡೆಂೆ, ಮಲೇರಿಯಾ, ಚಿಕೂಗುನ್ಯಾದಂತಹ ರೋಗಗಳು ಬರುತ್ತವೆ. ಹೀಗಾಗಿ ಪ್ರತಿದಿನ ಆರೋಗ್ಯವಾಗಿರಬೇಕಾದರೆ ನಮ್ಮ ಸುತ್ತಲೂ ಪರಿಸರವನ್ನು ಆರೋಗ್ಯಯುತವಾಗಿಡಬೇಕು. ನೀರಿನ ಶೇಖರಣೆಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಶರಣಕುಮಾರ ಬುಗಟಿ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಪ್ರತಿದಿನ ಬೇಗ ಎದ್ದು ವ್ಯಾಯಾಮ ಮಾಡಿ ಸತ್ವಯುತ ಆಹಾರ, ತರಕಾರಿ, ಹಣ್ಣುಗಳ, ಸೇವನೆ ಹಾಗೂ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಂಡು ಆರೋಗ್ಯವಂತರಾದರೆ ಸ್ವಸ್ಥ ಸಮಾಜ ನಿರ್ಮಿಸಬಹುದು ಎಂದರು.

ಆರೋಗ್ಯ ಸಹಾಯಕ ಹರ್ಷವರ್ಧನ ದೊಡ್ಡಮನಿ, ಶೋಭಾ ಮದ್ದಿನ, ಪ್ರತಿಭಾ ಇತರರು ಇದ್ದರು. ವಿಶಾಲಾಕ್ಷಿ ವಾಲಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net