ಉತ್ತಮ ಆಡಳಿತದಿಂದ ದೇಶ ಸುಭದ್ರ

modi
Published on

ಮುಂಡರಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಪ್ರಯುಕ್ತ ಬಿಜೆಪಿ ಮುಂಡರಗಿ ಮಂಡಲ ವತಿಯಿಂದ ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ನಂತರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಾಲು-ಹಣ್ಣು ವಿತರಿಸಲಾಯಿತು.

ಕರಬಸಪ್ಪ ಹಂಚಿನಾಳ ಮಾತನಾಡಿ, ನರೇಂದ್ರ ಮೋದಿಜಿಯವರು ದೇಶದ ಪ್ರಧಾನಿಯಾದ ನಂತರ ದೇಶವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಅವರು ಕೈಗೊಂಡ ಅನೇಕ ಯೋಜನೆಗಳಿಂದ ಜನರಿಗೆ ಅನುಕೂಲವಾಗಿದೆ ಎಂದರು.

ಡಾ.ಕುಮಾರಸ್ವಾಮಿ ಹಿರೇಮಠ ಮಾತನಾಡಿ, ಇಡೀ ಜಗತ್ತಿನಲ್ಲಿ ಭಾರತ ದೇಶವು ಆರ್ಥಿಕತೆಯಲ್ಲಿ 3ನೇ ಸ್ಥಾನಕ್ಕೆ ತರುವಲ್ಲಿ ಪ್ರಧಾನಮಂತ್ರಿ ಮೋದಿ ಅವರು ಸಾಕಷ್ಟು ಶ್ರಮಿಸಿದ್ದು, ಇದು ಎಲ್ಲ ಭಾರತೀಯರಿಗೆ ಸಲ್ಲುತ್ತದೆ. ಅವರು ಕೈಗೊಂಡ ಅತ್ಯುತ್ತಮ ಕಾರ್ಯಕ್ರಮಗಳಿಂದ ದೇಶ ಸುಭದ್ರವಾಗಿದೆ ಎಂದರು.

ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಪ್ರಶಾಂತ ಗುಡಪ್ಪನವರ, ಬಸವರಾಜ ಬಿಳಿಮಗ್ಗದ, ಆನಂದಗೌಡ ಪಾಟೀಲ, ರವೀಂದ್ರ ಉಪ್ಪಿನಬೆಟಗೇರಿ, ಕೊಟ್ರೇಶ ಅಂಗಡಿ, ರಜನಿಕಾಂತ ದೇಸಾಯಿ, ಎಸ್.ಎಸ್. ಗಡ್ಡದ, ರವಿ ಲಮಾಣಿ, ಸುಭಾಷ ಗುಡಿಮನಿ, ಶ್ರೀನಿವಾಸ ಅಬ್ಬಿಗೇರಿ, ನಾಗರಾಜ ಕೊರ್ಲಹಳ್ಳಿ, ಮಲ್ಲಿಕಾರ್ಜುನ ಹಣಜಿ, ಯಲ್ಲಪ್ಪ ಗಣಾಚಾರಿ, ಮೈಲಾರಪ್ಪ ಕಲಕೇರಿ,

ರವಿಗೌಡ ಪಾಟೀಲ, ಪರಶುರಾಮ ಕರಡಿಕೊಳ್ಳ, ಚಿನ್ನಪ್ಪ ವಡ್ಡಟ್ಟಿ, ಪವನ ಮೇಟಿ, ಪರಶುರಾಮ ಸುಣಗಾರ, ಟಿ.ಬಿ.ದಂಡಿನ, ಮಂಜುನಾಥ ಮುಧೋಳ, ರಂಗಪ್ಪ ಕೋಳಿ, ಪವಿತ್ರಾ ಕಲ್ಲಕುಟಗರ, ಜ್ಯೋತಿ ಹಾನಗಲ್, ಅರುಣಾ ಪಾಟೀಲ,ವೀಣಾ ಬೂದಿಹಾಳ, ಪುಷ್ಪಾ ಉಕ್ಕಲಿ, ಪವನ ಲೇಂಡ್ವೆ, ಶಿವಾನಂದ ಪೂಜಾರ, ನಾಗರಾಜ ಗುಡಿಮನಿ, ದಸ್ತಗಿರಸಾಬ ಹೊಸಮನಿ, ಆರ್.ಎಂ. ತಪ್ಪಡಿ, ಅಶೋಕ ಸೀಗೇನಹಳ್ಳಿ, ಈರಣ್ಣ ತುಪ್ಪದ, ಬಸವರಾಜ ಚಿಗಣ್ಣವರ, ಆನಂದ, ಅಶೋಕ ಚೂರಿ, ವಿನಾಯಕ ಕರಿಬಿಷ್ಟಿ, ವೆಂಕಟೇಶ ಪುರದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net