ವಿಕಸಿತ ಭಾರತಕ್ಕೆ ಉತ್ತಮ ಆಡಳಿತ ಮುಖ್ಯ

Untitled-1
ದೇವನಹಳ್ಳಿ ತಾಲೂಕಿನ ಯಲಿಯೂರಿನ ತಮ್ಮೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ತಾಲೂಕು ಮಂಡಲ ಅಧ್ಯಕ್ಷ ಅಂಬರೀಶ್​ಗೌಡ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ಮುಖಂಡರಾದ ಅನಿಲ್​, ದೇಸು ನಾಗಾರಾಜ್​, ಬೂದಿಗೆರೆ ಫ್ರಭು, ಪುನೀತ್​, ವಿಜಯ ರಾವೇಂದ್ರ, ನಾಗವೇಣಿ ಶ್ರೀನಿವಾಸ್​ ಇದ್ದರು.
Published on

ಚನ್ನರಾಯಪಟ್ಟಣ : ಬಿಜೆಪಿ ಸೇರ್ಪಡೆಯಾದ ಪ್ರತಿಯೊಬ್ಬರೂ ಬೂತ್​ ಮಟ್ಟದಲ್ಲಿ ಪಕ್ಷವನ್ನು ಸಂಟಿಸಿ ಮುಂಬರುವ ಚುನಾವಣೆಗಳಲ್ಲಿ ಪಕ್ಷವನ್ನು ಭದ್ರಗೊಳಿಸಿಸಬೇಕು ಎಂದು ತಾಲೂಕು ಮಂಡಲ ಅಧ್ಯಕ್ಷ ಅಂಬರೀಶ್​ ಗೌಡ ಹೇಳಿದರು.

ದೇವನಹಳ್ಳಿ ತಾಲೂಕಿನ ಯಲಿಯೂರಿನ ತಮ್ಮೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸೇರ್ಪಡೆ ಕಾರ್ಯಕ್ರಮ, ಶಕ್ತಿ ಕೇಂದ್ರ ಸಭೆ, ಆಯುಷ್ಮಾನ್​ ಭಾರತ್​ ನೊಂದಣಿ ಹಾಗೂ ಸಸಿ ವಿತರಣೆ, ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಮೇಲಿನ ದಾಳಿಯನ್ನು ಅಚ್ಚುಕಟ್ಟಾಗಿ ಭೇದಿಸಿ ರಕ್ಷಣೆ ಮಾಡುವಲ್ಲಿ ಉತ್ತಮ ಆಡಳಿತ ನೀಡುತ್ತಿರುವ ಪಕ್ಷವೆಂದರೆ ಬಿಜೆಪಿ. ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಪ್ರತಿಯೊಬ್ಬರು ದೇಶಪ್ರೇಮ, ರಕ್ಷಣೆ ಮತ್ತು ಗೌರವ ಕಾಪಾಡುವತ್ತ ನಮ್ಮ ನಡೆ ಇರಬೇಕು. ಎಲ್ಲರಿಗೂ ಸರಿಸಮಾನವಾದ ಅವಕಾಶವಿದೆ ಎಂಬುದನ್ನು ಮರೆಯದೇ ಪಕ್ಷ ಭದ್ರಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

ಯುವ ಮೋರ್ಚಾ ಅಧ್ಯಕ್ಷ ಮೋಹನ್​ ಕುಮಾರ್​ ಮಾತನಾಡಿ, ಸಮಾಜಮುಖಿ ಕೆಲಸಗಳಿಂದ ದೇಶದ ಅಭಿವೃದ್ಧಿ ಸಾಧ್ಯ. ಅಂತಹ ಆಡಳಿತ ನೀಡುವ ಸಾಮರ್ಥ್ಯ ಹೊಂದಿರುವುದು ಬಿಜೆಪಿ ಮಾತ್ರ. ತಾಲೂಕಿನಲ್ಲಿ ಗೋಶಾಲೆ ನಿರ್ಮಾಣವಾದಲ್ಲಿ ರೈತರು ಹಸು ಕರುಗಳನ್ನು ಮಾರುವುದಿಲ್ಲ. ಹಾಗಾಗಿ ಗೋಶಾಲೆ ನಿರ್ಮಿಸಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net