ಚರ್ಚ್‌ಗಳಲ್ಲಿ ಮೇಣದ ಬತ್ತಿ ಹಿಡಿದು ಪ್ರಾರ್ಥನೆ- ಗುಡ್ ಫ್ರೈಡೇ ಆಚರಣೆ

Oplus_16908288
Oplus_16908288
Published on

ಆಲೂರು : ತಾಲೂಕಿನ ವಿವಿಧ ಚರ್ಚ್‌ಗಳಲ್ಲಿ ಶುಕ್ರವಾರ ಗುಡ್ ಫ್ರೈಡೇ ಅಂಗವಾಗಿ ವಿಶೇಷ ಪ್ರಾರ್ಥನೆಗಳು ನೆರವೇರಿದವು. ಕ್ರೈಸ್ತ ಸಮುದಾಯದ ನೂರಾರು ಭಕ್ತರು ಚರ್ಚ್‌ಗಳಲ್ಲಿ ಮೇಣದ ಬತ್ತಿ ಹಿಡಿದು ಪ್ರಾರ್ಥನೆ ಸಲ್ಲಿದರು.ಆಲೂರು ತಾಲೂಕಿನ ಪಾಳ್ಯ ಹೋಬಳಿ ಜೋಸೆಫ್ ನಗರದ ಸಂತ ಜೋಸೆಫರ ಚರ್ಚ್, ಮಗ್ಗೆ ಗ್ರಾಮದಲ್ಲಿರುವ ಸೇಂಟ್ ಫ್ರಾನ್ಸಿಸ್ ಕ್ಷೇವಿಯರ್ ಪ್ರಾರ್ಥನಾ ಮಂದಿರಗಳಲ್ಲಿ ವಿಶೇಷ ಆರಾಧನೆಗಳು ನಡೆದವು. ಜೋಸೆಫ್ ನಗರದ ಚರ್ಚಿನಲ್ಲಿ ಫಾದರ್ ಆಲ್ವಿನ್ ಡಿಸೋಜಾ ಪ್ರವಚನ ನೀಡಿ, ಕ್ರಿಶ್ಚಿಯನ್ ಧರ್ಮದಲ್ಲಿ ಮಹತ್ವದ ತಿರುವು ಪಡೆದ ಯೇಸುಕ್ರಿಸ್ತನ ಶಿಲುಬೆಗೇರಿಸುವ ಸನ್ನಿವೇಶವು ಶುಭ ಶುಕ್ರವಾರ ಎಂದೇ ಖ್ಯಾತವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net