ಕೋಟೆ ಅಭಿವೃದ್ಧಿಗೆ ಕೂಡಿ ಬಂದ ಭಾಗ್ಯ!

oplus_2097152
oplus_2097152
Published on

ರಾಚಯ್ಯ ಸ್ವಾಮಿ ಮಾಚನೂರು

ರಾಯಚೂರು ಕಳೆದ ಸುಮಾರು ವರ್ಷಗಳಿಂದ ಹಾಳು ಬಿದ್ದಿದ್ದ ನಗರದ ಕೋಟೆ ಅಭಿವೃದ್ದಿಗೆ ಭಾಗ್ಯ ದೊರೆತ್ತಿದ್ದು, ಜಿಲ್ಲಾಽಕಾರಿ ನಿತೀಶ್ ಕೆ., ಹಾಗೂ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರರಿಂದ ಬಿರುಸಿನ ಸಂಚಾರ ಮಾಡಿ ಇತ್ತಿಚ್ಚಿಗೆ ಕೆಪಿಸಿಎಲ್‌ನಿಂAದ ೨ ಕೋಟಿ ರೂ.ಅನುದಾನ ಮಂಜೂರು ಮಾಡಿಸಿ ಕೋಟೆಯ ಸುತ್ತಲು ಲೈಟಿಂಗ್ ವ್ಯವಸ್ಯೆಗೆ ಮುದಾಗಿದ್ದಾರೆ.

ಈ ಹಿಂದೆ ಸರ್ಕಾರದಿಂದ ಕೋಟ್ಯಂತರ ಅನುದಾನವನ್ಮು ಕೋಟೆ ಅಭಿವೃದ್ದಿಗೆ ನೀಡಿತ್ತು. ಆದರೆ  ಸ್ಥಳೀಯಾಡಳಿತ ತೆರವಿಗೆ ಮುಂದಾಗದಿರುವುದು ಕೋಟೆ ಅಭಿವೃದ್ಧಿಗೆ ಕಂಟಕವಾಗುತ್ತಿದೆ. ಪುರಾತತ್ವ ಇಲಾಖೆ ಕೋಟ್ಯಂತರ ವೆಚ್ಚದಲ್ಲಿ ಅಭಿವೃದ್ಧಿಗೆ ಮುಂದಾಗುತ್ತಿದ್ದು, ಒತ್ತುವರಿ ತೆರವು ಮಾತ್ರ ಆಗುತ್ತಿಲ್ಲ ಎನ್ನುವ ಮಾತು ಕೇಳಿ ಬಂದಿದೆ.

ಎಷ್ಟು ಅನುದಾನ ಮಂಜೂರು

೨೦೧೫-೧೬ನೇ ಸಾಲಿನಲ್ಲಿ ಕೋಟೆ ಅಭಿವೃದ್ಧಿಗೆಂದು ೫ ಕೋಟಿ ಬಿಡುಗಡೆಗಿತ್ತು. ಆದರೆ ಕೆಲ ಅಽಕಾರಿಗಳ ಬೇಜವಾಬ್ದಾರಿಯಿಂದ ಕೇವಲ ೫೦ ಲಕ್ಷ ರೂ. ಹಣವನ್ನು ಸಣ್ಣ ಪುಟ್ಟ ದುರಸ್ತಿಗಾಗಿ ಬಳಸಲಾಗಿತ್ತು.  ಈ ಸಣ್ಣಪುಟ್ಟ ಕೆಲಸವನ್ನು ಲೋಕೋಪಯೋಗಿ ಇಲಾಖೆ ಮೂಲಕ ಕೆಲಸ ಮಾಡಿಸಲು ಮುಂದಾಗಿದ್ದರು,

ಆದರೆ ಯಾವುದೇ ಪುರಾತತ್ವ ಕೆಲಸಗಳನ್ನು ಸಂಬAಽಸಿ ಇಲಾಖೆಯ ಇಂಜಿನಿಯರ್‌ಗಳೇ ಮಾಡಬೇಕಿದೆ. ಪುರತತ್ವ ಇಲಾಖೆಯಿಂದ ಭಾಗಶಃ ಕೋಟೆ ಒತ್ತುವರಿಯಾದ ಕಾರಣ ಡಿಸಿ ಕಚೇರಿ ಮುಂಭಾಗದ ಕೋಟೆಯನ್ನೇ ದುರಸ್ತಿ ಮಾಡಲಾಗಿತ್ತು.

ಆದರೆ ಇತ್ತಿಚ್ಚಿಗೆ ಜಿಲ್ಲಾಽಕಾರಿ ಹಾಗೂ ಪಾಲಿಕೆ ಆಯುಕ್ತರ ಸರ್ಕಾರಕ್ಕೆ ಪತ್ರ ಬರೆದು ಕೋಟೆ ಅಭಿವೃದ್ದಿಗಾಗಿ ೧ ಕೋಟಿ ರೂ. ಸರ್ಕಾರದಿಂದ ಹಾಗೂ ೨ ಕೋಟಿ ರೂ. ಕೆಪಿಸಿಎಲ್ ಸಿಎಸ್‌ಆರ್ ಅನುದಾನವನ್ನು ಮಂಜೂರು ಮಾಡಿಸಿದ್ದಾರೆ.

 ಒತ್ತುವರಿ ತೆರವಾಗಲಿ

ಜಿಲ್ಲಾಡಳಿತ, ಮಹಾನಗರ ಪಾಲಿಕೆ ಕೋಟೆ ಸಂರಕ್ಷಣೆಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಆದರೆ ಸ್ಥಳೀಯರು ನಿಜÁಂ ಕಾಲದ ದಾಖಲೆಗಳನ್ನು ತೋರಿಸಿ ಇದು ನಮ್ಮ ಜÁಗ ಎನ್ನುತ್ತಿದ್ದಾರೆ. ಆದರೆ, ಇತ್ತೀಚಿಗೆ ಮನೆಗಳನ್ನು, ಶೆಡ್‌ಗಳನ್ನು ಹಾಕಿಕೊಂಡರು ಕೂಡ ದಾಖಲೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದರೂ ಪಾಲಿಕೆ ಅಽಕಾರಿಗಳು ಗಾಢ ಮೌನಕ್ಕೆ ಜÁರಿದ್ದಾರೆ.

ಈ ವಿಚಾರದಲ್ಲಿ ಜಿಲ್ಲಾಽಕಾರಿಗಳು ಕೂಡ ಕಠಿಣ ಕ್ರಮ ಕೈಗೊಳ್ಳಬೇಕಿದ್ದು, ರಾಜÁರೋಷವಾಗಿ ಕಟ್ಟಡಗಳನ್ನು ಕಟ್ಟಿಕೊಳ್ಳುತ್ತಿದ್ದು, ಇದಕ್ಕೆ ಪಾಲಿಕೆ ಸದಸ್ಯರ ಕುಮ್ಮಕ್ಕು ಕೂಡ ಕೆಲಸ ಮಾಡುತ್ತಿದೆ.

ಅಽಕಾರಿಗಳು ಒತ್ತುವರಿ ತೆರವಿಗೆ ಮುಂದಾಗದಿದ್ದರೆ ಅಭಿವೃದ್ದಿಗೆ ಕಷ್ಟವಾಗುತ್ತಿದೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಅನುದಾನದಿಂದ ಏನೇನು ಅಭಿವೃದ್ದಿ

ಈ ಹಿಂದೆ ೨೦೧೫-೧೬ ರಲ್ಲಿ ಕೋಟೆ ಅಭಿವೃದ್ಧಿಗೆ ಬಂದ ೫ ಕೋಟಿ ಹಣ ವಿವಿಧ ಖಾತೆಗಳಿಗೆ ಹಂಚಿಕೆಯಾಗಿದೆ. ಲೋಕೋಪಯೋಗಿ ಇಲಾಖೆಗೆ ಕೆಲಸ ಮಾಡಿಸುವ ಉದ್ದೇಶದಿಂದ ಒಮದೂವರೆ ಕೋಟಿ ನೀಡಿದ್ದು, ಅದರಲ್ಲಿ ೫೦ ಲಕ್ಷ ಖರ್ಚಾಗಿದೆ.

ಒಂದು ಕೋಟಿ ಜಿಲ್ಲಾಽಕಾರಿಗಳ ಖಾತೆಯಲ್ಲಿದೆ. ಇದರ ಜತೆಗೆ ಬಂದಿರುವ ೩ ಕೋಟಿ ರೂ ಅನುದಾನವನ್ನು ಕೋಟೆ ಸುತ್ತಲು ಲೈಟಿಂಗ್ ವ್ಯವಸ್ಥೆ, ವಾಯು ವಿಹಾರಕ್ಕೆ ಅನುಕೂಲ, ಆಸನದ ವ್ಯವಸ್ತೆ ಹಾಗೂ ಕೋಟೆಯ ಸುತ್ತಲಿನ ಕಂದಕದಲ್ಲಿ ಹುಳು ತೆಗೆಯುವುದರ ಜತೆಯುವುದರ ಅಭಿವೃದ್ದಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

ಇತ್ತಿಚ್ಚಿಗೆ ನಗರದ ಕೋಟೆ ಪ್ರದೇಶವನ್ನು ಪಾಲಿಕೆಯ ಆಯುಕ್ತರ ಜತೆಗೆ ಸಂಚಾರ ಮಾಡಿದ್ದು, ಕೋಟೆಯ ಅಭಿವೃದ್ದಿಗಾಗಿ ಸರ್ಕಾರದಿಂದ ೦೧ ಕೋಟಿ ರೂ. ಹಾಗೂ ಕೆಪಿಸಿಎಲ್‌ನಿಂದ ೦೨ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕೋಟೆ ಪ್ರದೇಶದ ಒತ್ತುವರಿ ತೆರವುಗೊಳಸಿಒ ಅಭಿವೃದ್ದಿ ಮಾಡಲಾಗುವುದು.

ನಿತೀಶ್ ಕೆ ಜಿಲ್ಲಾಽಕಾರಿ ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net