ಸುಕ್ಷೇತ್ರ ಸೊಗಲದಲ್ಲಿ ಸರಳ ತೆಪ್ಪೋತ್ಸವ

1414
Published on

ಮರಕುಂಬಿ: ಸಮೀಪದ ಸುಕ್ಷೇತ್ರ ಸೊಗಲದ ಶಿವ-ಪಾರ್ವತಿ ಹಾಗೂ ಸೋಮೇಶ್ವರ ದೇವಸ್ಥಾನದಲ್ಲಿ ಗುರುವಾರ ಮಕರ ಸಂಕ್ರಾಂತಿಯ ಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನದ ಹೊಂಡದಲ್ಲಿ ತೆಪ್ಪೋತ್ಸವ ಜರುಗಿತು. ಕರೊನಾ ಕಾರಣ ಸಾರ್ವಜನಿಕರಿಗೆ ಸಮಾರಂಭ ವೀಕ್ಷಣೆಗೆ ಅವಕಾಶ ರದ್ದು ಪಡಿಸಲಾಗಿತ್ತು. ರಥವನ್ನು ಕಬ್ಬು, ತೆಂಗು ಸೇರಿ ವಿವಿಧ ಬಣ್ಣದ ಹೂಗಳಿಂದ ಅಲಂಕರಿಸಲಾಗಿತ್ತು.

ಸೋಮೇಶ್ವರ ದೇವಸ್ಥಾನದಲ್ಲಿದ್ದ ಬೆಳ್ಳಿ ಮೂರ್ತಿಯನ್ನು ಪಲ್ಲಕ್ಕಿಯ ರಥದಲ್ಲಿ ಪ್ರತಿಷ್ಠಾಪಿಸಿಲಾಗಿತ್ತು. ಆರ್ಚಕರು, ಪೂಜಾರಿ ಮನೆತನದವರು, ಟ್ರಸ್ಟ್ ಸದಸ್ಯರು ಸರಳವಾಗಿ ರಥ ಎಳೆದರು. ದೇವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೊಗಲ ಪ್ರವೇಶ ನಿಷೇಧವಿದ್ದ ಕಾರಣ ಭಕ್ತರು ಹೊಲಗಳಿಗೆ ತೆರಳಿ, ಕುಟುಂಬಸ್ಥರೊಂದಿಗೆ ಊಟ ಸೇವಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net