ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳಿ

Kudlgi School
ಬಣವಿಕಲ್ಲು ಗ್ರಾಮದ ಬಸವೇಶ್ವರ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಲಾಯಿತು. ಗ್ರಾಪಂ ಉಪಾಧ್ಯಕ್ಷ ಆರ್.ವೀರಣ್ಣ, ಆರ್‌ಕೆಎಸ್‌ಕೆ ಆಪ್ತ ಸಮಾಲೋಚಕ ಓಬಣ್ಣ, ಮುಖ್ಯಶಿಕ್ಷಕ ಎಸ್.ಎಂ.ಮರುಳಸಿದ್ದಯ್ಯ ಇದ್ದರು.
Published on

ಕೂಡ್ಲಿಗಿ: ತಾಲೂಕಿನ ಬಣವಿಕಲ್ಲು ಗ್ರಾಮದ ಬಸವೇಶ್ವರ ಪ್ರೌಢಶಾಲೆಯಲ್ಲಿ ತಾಲೂಕು ಆಸ್ಪತ್ರೆ, ಆರ್‌ಕೆಎಸ್‌ಕೆಯಿಂದ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮ ನಡೆಯಿತು.

ಆರ್‌ಕೆಎಸ್‌ಕೆ ಆಪ್ತ ಸಮಾಲೋಚಕ ಓಬಣ್ಣ ಮಾತನಾಡಿ, ಜೀವನ ಶೈಲಿ ಬದಲಾಗುತ್ತಿರುವ ಕಾರಣ ಹದಿಹರೆಯದವರಿಗೆ ಆರೋಗ್ಯ ಶಿಕ್ಷಣ ಅವಶ್ಯಕ. ಮುಖ್ಯವಾಗಿ ರಕ್ತಹೀನತೆ, ಪೌಷ್ಟಿಕ ಆಹಾರದ ಕೊರತೆ, ಋತುಚಕ್ರ ಸಂಬಂಧಿ ಸಮಸ್ಯೆಗಳು ಹಾಗೂ ವೈಯಕ್ತಿಕ ಅನಾರೋಗ್ಯ ಮೊದಲಾದವುಗಳು ಅವರನ್ನು ಬಲಹೀನರನ್ನಾಗಿ ಮಾಡುತ್ತವೆ. ಇಂಥ ಸಮಸ್ಯೆಗಳಿಂದ ಮುಕ್ತರಾಗಲು ವೈದ್ಯರ ಸಲಹೆ ಹಾಗೂ ಆರೋಗ್ಯಪೂರ್ಣ ನಡಾವಳಿಕೆ ಮತ್ತು ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು. ಕಿಶೋರಿಯರು ಸೊಪ್ಪು, ತರಕಾರಿ ಹಾಗೂ ಬೇಳೆಕಾಳುಗಳನ್ನು ಹೆಚ್ಚಾಗಿ ಊಟದಲ್ಲಿ ಬಳಸಿದರೆ ಆರೋಗ್ಯದ ಜತೆ ಪೌಷ್ಟಿಕಾಂಶ ದೊರೆಯುತ್ತದೆ ಎಂದರು.

ದಂತ ವೈದ್ಯ ಆನಂದ್ ಮಾತನಾಡಿದರು. ಜಿಲ್ಲಾ ಕಾರ್ಯಕ್ರಮ ಸಂಯೋಜಕ ಸಹದೇವ್, ಬಸವೇಶ್ವರ ಪ್ರೌಢಶಾಲಾ ಮುಖ್ಯಶಿಕ್ಷಕ ಎಸ್.ಎಂ.ಮರುಳಸಿದ್ದಯ್ಯ, ಜಿಲ್ಲಾ ಆರ್‌ಕೆಎಸ್‌ಕೆ ಸಂಯೋಜಕ ಯುವರಾಜ್, ಸಮುದಾಯ ಆರೋಗ್ಯಾಧಿಕಾರಿ ರೇಣುಕಾ, ಕಿರಿಯ ಆರೋಗ್ಯ ಸಹಾಯಕಿ ಯಾಸ್ಮೀನ್ ಬಾನು, ಗ್ರಾಪಂ ಉಪಾಧ್ಯಕ್ಷ ಆರ್.ವೀರಣ್ಣ, ಸದಸ್ಯ ಪೂರ್ಣಿಮಾ ಪ್ರಶಾಂತ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net