

ಕಾಗವಾಡ: ಸತ್ಕಾರ್ಯಗಳು ಮುಂದಿನ ಪೀಳಿಗೆಯೂ ನಮ್ಮನ್ನು ಸ್ಮರಿಸುವಂತೆ ಮಾಡುತ್ತವೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಜುಗೂಳ ಗ್ರಾಮದ ಮಲ್ಲಿಕಾರ್ಜುನ ದೇವಾಲಯದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಈರಗೌಡ ಬಸಗೌಡ ಪಾಟೀಲ ತೃತೀಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳ ಶಿಷ್ಯರಾಗಿ ಈರಗೌಡರು ಬದುಕಿನುದ್ದಕ್ಕೂ ಸನ್ಮಾರ್ಗದಲ್ಲಿ ಸಾಗಿದವರು. ಸಾಧು-ಸಂತರ ಮಾರ್ಗದರ್ಶನದಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆಗೈದಿದ್ದಾರೆ. ಅವರಲ್ಲಿರುವ ಉತ್ತಮ ಸಂಸ್ಕಾರಗಳು ಮಕ್ಕಳಲ್ಲೂ ಇದ್ದು, ಇತರರಿಗೆ ಆದರ್ಶವಾಗಿದ್ದಾರೆ ಎಂದರು.
ಕಾಗವಾಡ ಗುರುದೇವಾಶ್ರಮದ ಯತೀಶ್ವರಾನಂದ ಸ್ವಾಮೀಜಿ, ಟಾಕಳಿಯ ಶಿವದೇವ ಶ್ರೀಗಳು, ಪ್ರಸನ್ನಾನಂದ ಸ್ವಾಮಿಗಳು, ಬ್ರಹ್ಮಾನಂದ ಶ್ರೀಗಳು ಮಾತನಾಡಿದರು. ಒಂದು ನಿಮಿಷ ವೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಇತ್ತು.
ತಾತ್ಯಾಸಾಬ ಪಾಟೀಲ, ಅಣ್ಣಾಸಾಬ ಪಾಟೀಲ, ಬಾಳಾಸಾಬ ಪಾಟೀಲ, ಅಶ್ವೀನ್ ಪಾಟೀಲ, ವಿಜಯಾ ಪಾಟೀಲ, ರವೀಂದ್ರ ಪಾಟೀಲ, ಬಾಬಾಸಾಬ ಪಾಟೀಲ, ಮಹೇಶ ಪಾಟೀಲ, ಪ್ರಕಾಶ ಪಾಟೀಲ, ಡಾ. ಬಿ.ಬಿ. ಪಾಟೀಲ, ತಾತ್ಯಾಸಾಬ ಪಾಟೀಲ, ಗ್ರಾಪಂ ಅಧ್ಯಕ್ಷ ಕಾಕಾಸಾಬ ಪಾಟೀಲ, ರಾಜಗೌಡ ಪಾಟೀಲ, ಖಾತೆದಾರ ಪಾಟೀಲ, ಮಹಾವೀರ ಕಾತ್ರಾಳೆ, ದೀಪಕ ಪಾಟೀಲ, ಭರಮ್ಮಣ್ಣ ಚೌಗುಲೆ, ಪ್ರಮೋದ ಪಾಟೀಲ, ಬಾಬುರಾವ ಜಾಧವ, ಮಾರುತಿ ಮಿಣಚೆ, ಜ್ಯೋತಿ ಪಾಟೀಲ ಇತರರಿದ್ದರು.
ಜುಗೂಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಈರಗೌಡ ಪಾಟೀಲ ತೃತೀಯ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ನೆರವೇರಿಸಿದರು.