

ತಿಪಟೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವರ ದಿಟ್ಟ ನಿರ್ಧಾರದಿಂದ ದೇಶದಲ್ಲಿ ಅಚ್ಚೇ ದಿನ್ ಪ್ರಾರಂಭವಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು ತಿಳಿಸಿದರು.
ತಾಲೂಕಿನಲ್ಲಿ ಜಿಎಸ್‌ಟಿ ಸರಳೀಕರಣದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಮಾತನಾಡಿ, ದೇಶಾದ್ಯಂತ ಸೆ.22ರಿಂದ ಜಿಎಸ್‌ಟಿ ತೆರಿಗೆಯನ್ನು ಗಣನೀಯವಾಗಿ ಕಡಿಮೆ ವಾಡಿದ್ದು, ಇದರಿಂದ ಬಡ ಮಧ್ಯಮವರ್ಗ ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. ಮಧ್ಯಮವರ್ಗದವರ ಕೊಡು, ಕೊಳ್ಳುವ ಶಕ್ತಿ ಹೆಚ್ಚಳವಾಗಿದೆ ಎಂದರು.
ಜಿಎಸ್‌ಟಿ ತೆರಿಗೆ ಇಳಿಕೆಯಿಂದಾಗಿ ಕೈಗೆಟಕದ ದುಬಾರಿ ವಸ್ತುಗಳನ್ನು ಖರೀದಿಸುವ ಸಾಮರ್ಥ್ಯ ಮಧ್ಯಮವರ್ಗದವರಿಗೆ ಸಾಧ್ಯವಾಗಿದೆ. ಕೇಂದ್ರದಿಂದ ದೀಪಾವಳಿ ಕೊಡುಗೆ ನಿರೀಕ್ಷಿಸಿದ್ದ ಬಡ, ಮಧ್ಯಮ ವರ್ಗಕ್ಕೆ ದೀಪಾವಳಿಗೂ ಮುಂಚೆ ವಿಜಯದಶಮಿಯಂದು ಮೋದಿ ಮತ್ತು ಹಣಕಾಸು ಸಚಿವರು ಎಲ್ಲರೂ ಸ್ಮರಿಸುವಂತಹ ಅರ್ಥಪೂರ್ಣ ಉಡುಗೊರೆಯನ್ನೇ ಕೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷರ ಸೂಚನೆಯಂತೆ ಪ್ರಧಾನಿ ಮೋದಿ ಮತ್ತು ಹಣಕಾಸು ಸಚಿವರಿಗೆ ಅಭಿನಂದನೆ ಸಲ್ಲಿಸುವ ಸವಾರಂಭಗಳು ನಡೆಸಿದ್ದೇವೆ ಎಂದರು.
ವಾಜಿ ನಗರಸಭೆ ಸದಸ್ಯರಾದ ತರಕಾರಿ ಗಂಗಾಧರ್, ಲೋಕೇಶ್, ಹಳೇಪಾಳ್ಯ ಮಂಜುನಾಥ್, ಮುಖಂಡರಾದ ಕೆ.ಎಸ್ ಸದಾಶಿವಯ್ಯ, ಸಿಂಗ್ರಿ ದತ್ತಪ್ರಸಾದ್, ಲೋಕೇಶ್, ಬಿಸಲೇಹಳ್ಳಿ ಜಗದೀಶ್, ವಾವಿನತೋಪು ಮಂಜು, ಆಯಿಲ್‌ಚೇತನ್ ಇದ್ದರು.