ಉತ್ತಮ ನಾಗರಿಕರನ್ನು ರೂಪಿಸುವವನೇ ಶಿಕ್ಷಕ

6Athani1-Web
ಅಥಣಿ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಿಂದ ದಕ್ಷ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುರೇಶ ಚಿಕ್ಕಟ್ಟಿ, ಆರ್.ಡಿ.ಧರಿಗೌಡ, ಸದಾಶಿವ ಚಿಕ್ಕಟ್ಟಿ, ಸಿ.ಎ.ಇಟ್ನಾಳಮಠ, ಎಸ್.ಎ.ಸನದಿ ಹಾಗೂ ಎಸ್.ಎನ್.ಚಿಕ್ಕಮಠ, ಕಿರಣ ಬುರ್ಲಿ ಇತರರು ಇದ್ದರು.
Published on

ಅಥಣಿ: ಸಮಾಜದಲ್ಲಿ ಉತ್ತಮ ನಾಗರಿಕರನ್ನು ರೂಪಿಸುವವನೇ ನಿಜವಾದ ಶಿಕ್ಷಕ ಎಂದು ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶ ಚಿಕ್ಕಟ್ಟಿ ಹೇಳಿದ್ದಾರೆ. ಪಟ್ಟಣದ ಕಾಶೀಬಾಯಿ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಶನಿವಾರ 2020-21ನೇ ಸಾಲಿನ ದಕ್ಷ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಕ ಮಕ್ಕಳಿಗೆ ಉತ್ತಮ ಸಂಸ್ಕಾರ, ವಿದ್ಯೆ, ಬುದ್ಧಿ ನೀಡಿದರೆ ಅದರ ಪ್ರತಿಫಲ ಖಂಡಿತ ದೊರೆಯುತ್ತದೆ ಎಂದರು. ಸಿ.ಎ.ಇಟ್ನಾಳಮಠ ಮಾತನಾಡಿ, ಶಿಕ್ಷಕರಿಂದಲೇ ನಾಡಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ ಎಂದರು. ರಾಮಣ್ಣ ಧರಿಗೌಡ ಅಧ್ಯಕ್ಷತೆ ವಹಿಸಿದ್ದರು. ಮಂಗಸೂಳಿಯ ರುಕ್ಮಿಣಿ ನಾಯ್ಕರ್, ಹಲ್ಯಾಳದ ನಾಗಪ್ಪ ಉಗಾರ, ತಾಂವಶಿಯ ಅರುಣ ತುಕಾರಾಮ್ ಜಾಧವ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುವರ್ಣ ಗಡದೆ ಅವರಿಗೆ ಕಾಮ್ಸ್ ಒಕ್ಕೂಟಗಳ ವತಿಯಿಂದ ಗುರು ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯದರ್ಶಿ ಸದಾಶಿವ ಚಿಕ್ಕಟ್ಟಿ, ಎಸ್.ಎ.ಸನದಿ ಹಾಗೂ ಎಸ್.ಎನ್.ಚಿಕ್ಕಮಠ, ಕಿರಣ ಬುರ್ಲಿ ಹಾಗೂ ಶಿಕ್ಷಣ ಸಂಸ್ಥೆಯ ಶಿಕ್ಷಕ ಶಿಕ್ಷಕಿಯರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net