

ಸೋಮವಾರಪೇಟೆ: ಸಂತ ಜೋಸೆಫರ ವಿದ್ಯಾಸಂಸ್ಥೆಗಳ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಚರ್ಚ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ವೀರಾಜಪೇಟೆ ಸೇಂಟ್ ಆನ್ಸ್ ವಿದ್ಯಾಸಂಸ್ಥೆಯ ಮುಖ್ಯಸ್ಥ ಮದಲೈ ಮುತ್ತು, ವಿದ್ಯಾರ್ಥಿಗಳು ಪರಿಶ್ರಮ, ಗುರಿ, ಒಳ್ಳೆತನ ಹೊಂದಿದ್ದರೆ ಮಾತ್ರ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ. ಶಿಸ್ತು ಮೈಗೂಡಿಸಿಕೊಳ್ಳಬೇಕು. ನಾಯಕತ್ವಕ್ಕೆ ಉತ್ತಮ ನಡವಳಿಕೆಯೇ ಅಡಿಪಾಯ ಎಂದರು.
ಓಎಲ್‌ವಿ ವಿದ್ಯಾಸಂಸ್ಥೆಯ ಮುಖ್ಯಸ್ಥ ಜೋಶ್ನಾ, ಸಂತ ಜೋಸೆಫರ ವಿದ್ಯಾಸಂಸ್ಥೆಗಳ ಮುಖ್ಯಸ್ಥ ಫಾ.ಅವಿನಾಶ್, ಚರ್ಚ್‌ನ ಆಡಳಿತ ಮಂಡಳಿ ಸದಸ್ಯ ವಿನ್ಸಿ ಡಿಸೋಜ, ಪದವಿ ಕಾಲೇಜು ಪ್ರಾಂಶುಪಾಲ ಹರೀಶ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಥೋಮಸ್ ಅಂತೋಣಿ, ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ಹ್ಯಾರಿ ಮೋರಸ್ ಇದ್ದರು.
ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಎಂ. ದಿವಿನ್, ಕಾರ್ಯದರ್ಶಿಯಾಗಿ ಹಿತೈಷಿ, ಕ್ರೀಡಾ ಸಮಿತಿಯ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷೆ ನಿತ್ಯಾ, ಸಾಂಸ್ಕೃತಿಕ ಸಮಿತಿಗೆ ನೀತಾ ಮತ್ತು ಶಾನ್ ಗೌಡ, ಶಿಸ್ತು ಸಮಿತಿಯ ಅಧ್ಯಕ್ಷರಾಗಿ ಇಂದುನಾಥ್, ಉಪಾಧ್ಯಕ್ಷರಾಗಿ ರಿಶಾಲ್ ಸಿಕ್ವೇರಾ, ಸ್ವಚ್ಛತಾ ಸಮಿತಿಗೆ ಪ್ರಜ್ಞಾ-ಸೃಜನ್, ಎನ್‌ಎಸ್‌ಎಸ್ ನಾಯಕನಾಗಿ ಸೃಜನ್, ಉಪ ನಾಯಕಿಯಾಗಿ ಹರ್ಷಿತಾ, ರೆಡ್ ಕ್ರಾಸ್ ಸಮಿತಿಗೆ ಯೋಗೇಶ್ವರ್ ಮತ್ತು ದೀಪಾಲಿ, ಇಎಲ್‌ಸಿ ಸಮಿತಿಗೆ ಪ್ರನೂಶ್ ಮತ್ತು ವಿಯೋಲಿನ್ ಲೋಬೋ, ರೋವರ್ಸ್ ಕ್ಲಬ್‌ಗೆ ವೈಭವ್, ರೇಂಜರ್ಸ್ ಕ್ಲಬ್‌ಗೆ ಆದ್ಯಾ, ಇಕೋ ಕ್ಲಬ್‌ಗೆ ತನ್ಮಯ್ ಮತ್ತು ಜೆಸ್ವಿನ್, ರೆಡ್ ಹೌಸ್‌ಗೆ ಮೋಕ್ಷಿತ್, ಗ್ರೀನ್ ಹೌಸ್‌ಗೆ ಹರಿಣಿ, ಬ್ಲೂ ಹ್ಸೌಸ್‌ಗೆ ನಂದಿನಿ, ಯೆಲ್ಲೋ ಹೌಸ್‌ಗೆ ಅಮೃತ ಅವರುಗಳು ಆಯ್ಕೆಯಾಗಿದ್ದು, ಅಧಿಕಾರ ಸ್ವೀಕರಿಸಿದರು.
ಇದರೊಂದಿಗೆ ಆಡಳಿತ ಮಂಡಳಿ ಪದಾಧಿಕಾರಿಗಳಾಗಿ ನಿಖಿಲೇಶ್, ರತನ್, ವೇದಿತ, ಸಂಜಯ್, ರಿತು, ನಿತಿನ್, ವೈಷ್ಣವಿ, ಕುಶಾಲ್, ಧನ್ಯಾ, ವೆಂಕಟೇಶ್, ತೌಫೀನಾ, ಮಾನಸ ಆಯ್ಕೆಯಾಗಿದ್ದು, ವಿದ್ಯಾರ್ಥಿ ಸಂಘದ ಎಲ್ಲಾ ನಾಯಕರುಗಳಿಗೆ ಫಾ. ಅವಿನಾಶ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.