ನಿರಂತರ ಅಧ್ಯಯನದಿಂದ ಉತ್ತಮ ಸಾಧನೆ

school
Published on

ನರಗುಂದ: ಶಿಕ್ಷಣ ಹಾಗೂ ಸರ್ಕಾರದ ಯೋಜನೆ ಸಮಾಜದ ಪ್ರತಿಯೊಂದು ವರ್ಗದ ಮಕ್ಕಳಿಗೆ ದೊರೆಯಬೇಕಾದರೆ ನಿರಂತರ ಅಧ್ಯಯನದಿಂದ ಅತ್ಯುತ್ತಮ ಜ್ಞಾನಾರ್ಜನೆ ಹೊಂದಬೇಕು ಎಂದು ಬಾಬಾಸಾಹೇಬ ಶಿಕ್ಷಣ ಸಮಿತಿ ಕಾರ್ಯದರ್ಶಿ ರಾಜು ಕಲಾಲ ಹೇಳಿದರು.

ಪಟ್ಟಣದ ರೋಟರ‌್ಯಾಕ್ಟ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಪ್ರಾರಂಭೋತ್ಸವಕ್ಕೆ ಇತ್ತೀಚೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕಳೆದು ಹೋದ ಸಮಯ ಎಂದಿಗೂ ಬರುವುದಿಲ್ಲ. ಹೀಗಾಗಿ ಸಮಯದ ಸದುಪಯೋಗಪಡಿಸಿಕೊಂಡು ಶಿಕ್ಷಕರು ಮಾಡುವ ಪಾಠದ ಕಡೆಗೆ ಮಕ್ಕಳು ಹೆಚ್ಚಿನ ಗಮನಹರಿಸಬೇಕು. ವಿದ್ಯೆಯ ಜತೆಗೆ ವಿನಯವನ್ನು ಮೈಗೂಡಿಸಿಕೊಂಡರೆ ಕಲಿತ ಶಿಕ್ಷಣ ಸಾರ್ಥಕವಾಗುತ್ತದೆ ಎಂದರು.

ಪ್ರಾಥಮಿಕ ಮುಖ್ಯೋಪಾಧ್ಯಾಯ ಎಫ್.ವಿ. ಶಿರುಂದಮಠ, ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಪಿ.ವಿ. ಕೆಂಚನಗೌಡ್ರ, ಬಿ.ಎಸ್. ಕಬಾಡ್ರ, ಜ್ಯೋತಿ ಹಿರೇಮನಿ, ವೈ.ಆರ್. ತಳವಾರ, ಎಸ್.ವಿ. ಬ್ಯಾಹಟ್ಟಿ, ಎಂ.ಆರ್. ಜವಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net