ಸೃಜನಶೀಲ ಚಟುವಟಿಕೆಗಳಿಂದ ಮಾತ್ರ ಶಿಕ್ಷಣದಲ್ಲಿ ಉತ್ತಮ ಸಾಧನೆ ಸಾಧ್ಯ

7 ckm 4
ಚಿಕ್ಕಮಗಳೂರಿನ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ಸ ಮತ್ತು ರೇಂಜರ್ಸ್ ಘಟಕಗಳ ಉದ್ಘಾಟನೆಯನ್ನು ಸ್ಕೌಟ್ಸ್ ಅಂಡ್ ಗೈಡ್ಸ್ ತರಬೇತಿ ಆಯುಕ್ತೆ ಸಂಧ್ಯಾರಾಣಿ ನೆರವೇರಿಸಿದರು. ಕಿರಣ್ ಕುಮಾರ್, ಮಿನಿ ಥಾಮಸ್, ಎಂ.ಆರ್.ಚAದ್ರಶೇಖರ್, ಮಮತಾ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಇಂಗ್ಲೆAಡ್‌ನಲ್ಲಿ ಕೇವಲ ೨೦ ವಿದ್ಯಾರ್ಥಿಗಳಿಂದ ಆರಂಭಗೊAಡ ಸ್ಕೌಟ್ಸ್ ಅಂಡ್ ಗೈಡ್ಸ್ ಚಳವಳಿ ಇಂದು ವಿಶ್ವದಲ್ಲಿ ಕೋಟ್ಯಂತರ ಮಕ್ಕಳ ಶೈಕ್ಷಣಿಕ ಚಟುವಟಿಕೆಯಲ್ಲಿ ಕ್ರಿಯಾಶೀಲತೆಯ ಧ್ಯೋತಕವಾಗಿದೆ ಎಂದು ಸ್ಕೌಟ್ಸ್ ಅಂಡ್ ಗೈಡ್ಸ್ ತರಬೇತಿ ಆಯುಕ್ತೆ ಸಂಧ್ಯಾರಾಣಿ ತಿಳಿಸಿದರು.

ನಗರದ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ಸ ಮತ್ತು ರೇಂಜಸ್ ಘಟಕಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸ್ಕೌಟ್ಸ್ ಅಂಡ್ ಗೈಡ್ಸ್ನಿಂದಾಗಿ ಸಾಮಾಜಿಕ ಕಳಕಳಿ, ಸಮುದಾಯ ಸೇವೆ, ದೇಶಸೇವೆ ಗುಣ ಮಕ್ಕಳಲ್ಲಿ ಬೆಳೆಯಲಿದೆ ಎಂದು ಹೇಳಿದರು.
ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೂ ಎಲ್ಲರನ್ನು ಕ್ರಿಯಾಶೀಲರನ್ನಾಗಿ ಮಾಡುವ ಒಂದು ಚಳುವಳಿಯಾಗಿ ಸ್ಕೌಟ್ಸ್ ಅಂಡ್ ಗೈಡ್ಸ್ ಬೆಳೆದಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಘಟನಾ ಆಯುಕ್ತ ಕಿರಣ್ ಕುಮಾರ್, ಮೊಬೈಲ್ ಗೀಳಿನಿಂದ ವಿದ್ಯಾರ್ಥಿಗಳು ಹೊರ ಬಂದರೆ ಸಾಧನೆ ಮಾಡಲು ಸಾಧ್ಯ. ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ ನಿಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು. ಜೊತೆಗೆ ದುಡಿಮೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಸಿದರು.
ಕಾಲೇಜು ಪ್ರಾಚಾರ್ಯೆ ಮಿನಿ ಥಾಮಸ್ ಮಾತನಾಡಿ, ಕಾಲೇಜಿನ ರೋವರ್ಸ್ ಮತ್ತು ರೇಂಜಸ್ ಘಟಕಗಳು ಕಳೆದ ಎಂಟು ವರ್ಷಗಳಿಂದ ಅತ್ಯಂತ ಕ್ರಿಯಾಶೀಲರಾಗಿ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತ ಬಂದಿರುವುದು ಸಂತಸದ ಸಂಗತಿ. ಸಮುದಾಯ ಸೇವೆಯಲ್ಲಿ ಎರಡು ಘಟಕಗಳು ವೃದ್ಧಾಶ್ರಮ ,ಅನಾಥಾಶ್ರಮಗಳಲ್ಲಿ ಹಾಗೂ ದುರ್ಬಲರು ಮತ್ತು ಕಷ್ಟದಲ್ಲಿರುವವರ ಪರವಾಗಿ ಕಾರ್ಯನಿರ್ವಹಿಸುತ್ತಾ ಬರುತ್ತಿವೆ. ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದು ನಮಗೆ ಸಂತಸ ಉಂಟು ಮಾಡಿದೆ ಎಂದರು.
ರಾಜ್ಯಶಾಸ್ತç ಉಪನ್ಯಾಸಕ ಹಾಗೂ ರೋವರ್ ಸ್ಕೌಟ್ಸ್ ತಂಡದ ನಾಯಕ ಎಂ.ಆರ್.ಚAದ್ರಶೇಖರ್ ಮಾತನಾಡಿ, ಕಾಲೇಜು ಹಂತದಲ್ಲಿ ಸಿಗುವ ಸ್ಕೌಟ್ಸ್ ಮತ್ತು ಗೈಡ್ ಅವಕಾಶಗಳು ವಿದ್ಯಾರ್ಥಿಗಳ ಮನ ಪರಿವರ್ತನೆ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಪ್ರೇರಣೆಯಾಗುತ್ತವೆ ಎಂದು ಹೇಳಿದರು.
ರೇಂಜರ್ಸ್ ಸ್ಕೌಟ್ಸ್ ನಾಯಕಿ ಮಮತಾ, ವಿದ್ಯಾರ್ಥಿಗಳಾದ ವಿನುತಾ ಗೌಡ, ಬಿಂದು, ಡಿ.ಎಂ.ನಿರೀಕ್ಷಾ, ಸಾನಿಯಾ, ಕುಮಾರ್ ನಿಹಾಲ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net