

ವಿಜಯಪುರ : ನಗರದ ಅಟಲ್ ಬಿಹಾರಿ ವಾಜಪೇಯಿ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಉತ್ತಮ ಸಾಧನೆಗೈದಿದ್ದಾರೆ.
ಬೆಂಗಳೂರಿನ ಜೈ ಪ್ರಕಾಶ ನಾರಾಯಣ ನ್ಯಾಷನಲ್ ಒಳ ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಣ ಇಲಾಖೆ ವತಿಯಿಂದ ಕಳೆದ ನ. 21 ರಂದು ನಡೆದ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳಾದ ರಿತೇಶ ಶೀಲವಂತ ಹಾಗೂ ವೀರೇಶ ಇಳಜೇರಿ ತೃತೀಯ ಸ್ಥಾನ ಪಡೆದು ಜಯಶಾಲಿಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಉಪಾಧ್ಯ ಸಂಗನಬಸಪ್ಪ ಸಜ್ಜನ, ಸಂಸ್ಥೆಯ ಚೇರ್ಮನ್ ಬಸಯ್ಯ ಹಿರೇಮಠ, ಶಾಲಾ ನಾಮ ನಿರ್ದೇಶಿತ ಅಧ್ಯ ಬಸವರಾಜ ಸುಗೂರ, ಹಣಕಾಸು ಕಾರ್ಯದರ್ಶಿ ಸದಾನಂದ ದೇಸಾಯಿ, ಜಂಟಿ ಕಾರ್ಯದರ್ಶಿ ಎಂ.ಎಂ. ಸಜ್ಜನ, ಸಂಸ್ಥೆಯ ಕೋಶಾಧಿಕಾರಿ ಶಿವಾನಂದ ನೀಲಾ, ಶಾಲಾ ಆಡಳಿತಾಧಿಕಾರಿ ಡಾ. ಎಚ್. ವೆಂಕಟೇಶ, ಮುಖ್ಯ ಗುರುಮಾತೆ ಐಶ್ವರ್ಯ ಸಂಗಮ, ತರಬೇತುದಾರ ಪ್ರವಿಣಕುಮಾರ ವಠಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.