ಗೋಣಿಕೊಪ್ಪ ರೋಟರಿಯಿಂದ ಲೇಖನಿ ಸಾಮಗ್ರಿ ವಿತರಣೆ

5 gkp 01.
ಶಾಲಾ ಮಕ್ಕಳಿಗೆ ಲೇಖನಿ ಸಾಮಗ್ರಿ ರೋಟರಿ ಸದಸ್ಯರಿಂದ ವಿತರಿಸಲಾಯಿತು.
Published on

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲೂಕು ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೂಚಮಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನಡಿಕೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಬಲ್ಯಮಂಡೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಗೋಣಿಕೊಪ್ಪದ ರೋಟರಿ ಸಂಸ್ಥೆಯಿಂದ ಇತ್ತೀಚೆಗೆ ಲೇಖನಿ ಸಾಮಗ್ರಿ ವಿತರಿಸಲಾಯಿತು.

ವೈದ್ಯ ಚಂದ್ರಶೇಖರ್ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿ ವಿತರಿಸಿ ಮಕ್ಕಳು ಲೇಖನಿ ಸಾಮಗ್ರಿಗಳ ಬಳಕೆ ಮಾಡಿಕೊಳ್ಳಬೇಕು. ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕು ಎಂದು ಕಿವಿಮಾತು ತಿಳಿಸಿದರು.

ಗ್ರಾಮಪಂಚಾಯಿತಿ ಅಧ್ಯಕ್ಷೆ ದೇಯಂಡ ಜಯಂತಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುಶೀಲಾ, ರೋಟರಿ ಸಂಸ್ಥೆ ಅಧ್ಯಕ್ಷ ವಿಜಯ್, ಕಾರ್ಯದರ್ಶಿ ಪ್ರಮೋದ್ ಕಾಮತ್, ಸಹಾಯಕ ಪ್ರಾಂತಪಾಲದಿಲನ್ ಚಂಗಪ್ಪ, ಬಲ್ಯ ಮಂಡೂರು ಶಾಲೆಯ ಮುಖ್ಯಶಿಕ್ಷಕರಾದ ಕೆ.ಪಿ ಪವಿತ್ರಾ, ತೂಚಮಕೇರಿ ಶಾಲೆಯ ಮುಖ್ಯಶಿಕ್ಷಕ ಸುಬ್ರಮಣ್ಯ, ನಡಿಕೇರಿ ಶಾಲೆಯ ಮುಖ್ಯಶಿಕ್ಷಕಿ ಎ.ಎನ್.ದಿವ್ಯಾ, ಶಿಕ್ಷಕರಾದ ತಿರುನೆಲ್ಲಿಮಡ ಜೀವನ್, ಹಸೀನಾ, ರೇಖಾ, ಮಂಜುಳಾ, ಅಂಗನವಾಡಿ ಕಾರ್ಯಕರ್ತೆ ಎಂ.ಕೆ.ಪದ್ಮಾ, ಸಹಾಯಕಿ ಸೌಮ್ಯಾ, ಪ್ರೇಮಾ, ಸುನೋಜಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net