ಗೋಣಿಕೊಪ್ಪ ಪ್ಲಾಂಟರ್ಸ್ ಕ್ಲಬ್ ಚಾಂಪಿಯನ್

12 gkp 2
Published on

ಗೋಣಿಕೊಪ್ಪ: ಹೊನಲು ಬೆಳಕಿನ 5 ಎ ಸೈಡ್ ರಿಂಕ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಕೋಣಕಟ್ಟೆ ರೈರ್ಸ್‌ ತಂಡವನ್ನು ಸೋಲಿಸುವ ಮೂಲಕ ಗೋಣಿಕೊಪ್ಪ ಕೈಕೇರಿಯ ಪ್ಲಾಂಟರ್ಸ್ ಕ್ಲಬ್ ಜಯಭೇರಿ ಬಾರಿಸಿದೆ. ಕೊನೆಯ ಹಂತದವರೆಗೂ ತೀವ್ರ ಪೈಪೋಟಿ ನೀಡಿದ ಕೋಣಕಟ್ಟೆ ರೈಸರ್ಸ್ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿದೆ.

ಗೋಣಕೊಪ್ಪಲುವಿನ ಪ್ಲಾಂರ್ಸ್‌ ಅಸೋಸಿಯೇಷನ್ ವತಿಯಿಂದ ಹೊನಲು ಬೆಳಕಿನ 5ಎ ಸೈಡ್ ರಿಂಕ್ ಹಾಕಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಜಿಲ್ಲೆಯ 16 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ರೌಂಡ್ ರಾಬಿನ್ ಲೀಗ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಿತು. ಸೆಮಿಫೈನಲ್‌ಗೆ ಕೋಣಕಟ್ಟೆ ರೈಸರ್ಸ್, ಪ್ಲಾಂಟರ್ಸ್ ಕ್ಲಬ್ ವೈಟ್ಸ್ ಹಾಗೂ ಫಾಲ್ಕನ್ ತಂಡಗಳು ಪ್ರವೇಶ ಪಡೆದಿದ್ದವು. ಫೈನಲ್ ಪಂದ್ಯದಲ್ಲಿ ಕೋಣಕಟ್ಟೆ ರೈಸರ್ಸ್ ಹಾಗೂ ಗೋಣಕೊಪ್ಪ ಪ್ಲಾಂಟರ್ಸ್ ಕ್ಲಬ್ ನಡುವೆ ನಡೆದ ಪಂದ್ಯವು ಅತ್ಯಂತ ರೋಚಕವಾಗಿತ್ತು.

16 ತಂಡಗಳಲ್ಲಿ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ ಕ್ರೀಡಾಪಟುಗಳು ಭಾಗವಹಿಸಿ ತಮ್ಮ ಪ್ರದರ್ಶನ ತೋರಿದರು. ಪ್ರದರ್ಶನ ಪಂದ್ಯವು ಪೊನ್ನಂಪೇಟೆ ಸ್ಫೋರ್ಟ್ಸ್ ಹಾಸ್ಟೆಲ್ ಹಾಗೂ ಮಡಿಕೇರಿಯ ಸಾಯಿ ನಡುವೆ ನಡೆಯಿತು. ಈ ಪಂದ್ಯದ ಟ್ರೈ ಬ್ರೇಕರ್‌ನಲ್ಲಿ ಮಡಿಕೇರಿಯ ಸಾಯಿ ಮಹಿಳಾ ತಂಡವು ಗೆಲುವು ಸಾಧಿಸಿತ್ತು.

ಒಲಿಂಪಿಯನ್ ವಿ.ಆರ್. ರಘುನಾಥ್, ಕ್ಲಬ್ ಅಧ್ಯಕ್ಷ ಸಣ್ಣುವಂಡ ಸುದೇಶ್, ಚೆಪ್ಪುಡೀರ ಕಾರ್ಯಪ್ಪ, ಕ್ರೀಡಾಕೂಟದ ಸಂಚಾಲಕ ಸುಳ್ಳಿಮಾಡ ದೀಪಕ್, ಕಳ್ಳಿಚಂಡ ಗೌತಮ್, ಕೊಡಗು ಪ್ಲಾಂಟರ್ಸ್ ಕ್ಲಬ್ ಕಾರ್ಯದರ್ಶಿ ದೊಡ್ಡಮನೆ ಕೀರ್ತಿ ಕಿರಣ್, ನಿರ್ದೇಶಕರಾದ ಹೊಟ್ಟೆಂಗಡ ಬೋಪಯ್ಯ, ತೀತಿರ ಧರ್ಮಜ, ಹೊಟ್ಟೆಂಗಡ ಹೇಮಂತ್ ಅಚ್ಚಪ್ಪ, ಆದೇಂಗಡ ಪ್ರದೀಪ್, ದೊಡ್ಡಮನೆ ಭವಿನ್, ಕೋದಂಡ ದೇವಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net